ಎಸ್‌ಬಿಐ ಎಟಿಎಂ ಹಣ ದೋಚಿದ ಕಳ್ಳರು

0
16

ಚಿಟಗುಪ್ಪ (ಬೀದರ್): ಎಸ್ ಬಿ ಐ ಎಟಿಎಂನಲ್ಲಿ ಇರುವ ಹಣ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಚಿಟಗುಪ್ಪ ಪಟ್ಟಣದ ಹೃದಯ ಭಾಗದಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಕೆಳಗಿರುವ ಎಟಿಎಂನಲ್ಲಿರುವ ಹಣವನ್ನು ಅಪರಿಚಿತ ಕಳ್ಳರು ದೋಚಿಕೊಂಡು ಹೋದ ಘಟನೆ ಗುರುವಾರ ನಸುಕಿನ ಜಾವ ಜರುಗಿದೆ. ಪಟ್ಟಣದ ಮದ್ಯ ಭಾಗದಲ್ಲಿರುವ ಗಾಂಧಿ ವೃತ್ತದ ಜನನಿಬಿದ ಪ್ರದೇಶದಲ್ಲಿರುವ ಎಟಿಎಂನಲ್ಲಿ ಕಳ್ಳತನ ವಾಗಿರುವುದು ಪಟ್ಟಣದ ಜನತೆಯನ್ನು ವಿಭ್ರಾಂತಿ ಗೊಳಿಸಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಸಿಸಿಟಿವಿ ಕ್ಯಾಮೆರಾ ಫೂಟೇಜ್‌ಗಳನ್ನು ಪರಿಶೀಲಿಸುತ್ತಿದ್ದಾರೆ.

Previous articleಸಿರಿಧಾನ್ಯ ಬೆಳೆಯಲ್ಲಿ ಕರ್ನಾಟಕವು ದೇಶದಲ್ಲಿ 4ನೇ ಸ್ಥಾನದಲ್ಲಿದೆ
Next articleಸಂಸತ್ ಕಲಾಪ: ಅಶಿಸ್ತು ತೋರಿದ 14 ಸಂಸದರ ಅಮಾನತು!