ಎಲ್ಲಾ ವಿವಿಗಳಲ್ಲಿ 3500ಕ್ಕೂ ಹೆಚ್ಚು ಬೋಧಕರ ಹುದ್ದೆ ಖಾಲಿ

0
38

ಗುಣಮಟ್ಟದ ಕಾಲೇಜುಗಳನ್ನು ಸ್ಥಾಪಿಸಬೇಕು ಹೊರತು ವಿವಿಗಳನ್ನಲ್ಲ

ದಾವಣಗೆರೆ: ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಒಳಗೊಂಡಂತೆ ಮಂಜೂರಾದ 2800 ಬೋಧಕರ ಹುದ್ದೆಗಳು ಖಾಲಿ ಇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ದಾವಣಗೆರೆ ವಿಶ್ವವಿದ್ಯಾಲಯದ ಜ್ಞಾನ ಸೌಧ ಆವರಣದಲ್ಲಿ ಬುಧವಾರ ನಡೆದ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಹೊಸದಾಗಿ ಸೇರ್ಪಡೆಯಾದ ಹೊಸ ಎಮರ್ಜೆನ್ಸಿ ಕೋಸ್೯ಗಳಿಗೆ ಸಂಬಂಧಿಸಿದಂತೆ ಬೋಧಕರು ಹುದ್ದೆಗಳು ಮಂಜೂರಾಗಿಲ್ಲ. ಈ ಎಲ್ಲಾ ಹುದ್ದೆಗಳನ್ನು ಲೆಕ್ಕ ಹಾಕಿದರೆ ಸುಮಾರು 3500 ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಈ ಹುದ್ದೆಗಳು ಅವಶ್ಯಕತೆ ಇವೆ. ಆದರೆ ಎಲ್ಲಾ ಸರ್ಕಾರಗಳು ನಿರಂತರವಾಗಿ ನಿರ್ಲಕ್ಷ್ಯ ಮಾಡಿಕೊಂಡು ಬಂದಿವೆ‌. ಈ ಬಗ್ಗೆ ಸರ್ಕಾರ ಖಾಲಿ ಇರುವ ಬೋಧಕರ ಹುದ್ದೆ ತುಂಬಲು ಕ್ರಮ ವಹಿಸಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಗೊಂದು ವಿಶ್ವವಿದ್ಯಾಲಯಗಳು ಬೇಕೇ?, ಶಿಕ್ಷಣ ವ್ಯವಸ್ಥೆಯ ನ್ಯೂನತೆ ಸರಿಪಡಿಸಿ, ಗುಣಮಟ್ಟದ ಶಿಕ್ಷಣ ನೀಡಬೇಕೆಂಬುದನ್ನು ಪ್ರೊ. ಬಲರಾಮ್ ಅವರು ಹೇಳಿದ್ದಾರೆ. ಹಾಗಾಗಿ ನಾವು ಸಿಎಂ ಜತೆಗೆ ಚರ್ಚಿಸಿ, ವಿವಿಗಳ ಗುಣಮಟ್ಟ ಕಾಯ್ದುಕೊಂಡು ಗುಣಮಟ್ಟದ ಶಿಕ್ಷಣವನ್ನು ಬಡವಿದ್ಯಾರ್ಥಿಗಳಿಗೆ ನೀಡಲು ಸಮಿತಿ ರಚಿಸಲಾಗಿದ್ದು, ಈಗಾಗಲೇ ಮಾಹಿತಿ ಕ್ರೂಢೀಕರಿಸಲಾಗಿದ್ದು ಸಂಪುಟಕ್ಕೆ ನೀಡಲಿದ್ದೇವೆ ಎಂದು ತಿಳಿಸಿದರು.
ಇದಕ್ಕೆ ಪರಿಹಾರ ಕೂಡ ಸರ್ಕಾರ ನೀಡುವ ಬಗ್ಗೆ ಸಲಹೆ ಸೂಚನೆಗಳನ್ನು ನಾವು ಕೊಡಲಿದ್ದೇವೆ. ಸಿಎಂ ಸಹ ಈ ನಿಟ್ಟಿನಲ್ಲಿ ಆಲೋಚನೆ ಇದೆ. ನಾವೆಲ್ಲರೂ ವಿವಿಯ ಆರ್ಥಿಕ ಸ್ಥಿತಿಗತಿಗಳ ಪರಿಶೀಲನೆ ನಡೆಸಿ, ಹೊಸ ವಿವಿ ಸ್ಥಾಪನೆ ಬಗೆಗೆ ಯೋಚಿಸಬೇಕು. ಎಲ್ಲಿ ಗುಣಮಟ್ಟದ ಶಿಕ್ಷಣವಿದೆಯೋ ಅಲ್ಲಿ ಮಕ್ಕಳಿಗೆ ಸೇರಿಸಿ ಶಿಕ್ಷಣ ಕೊಡಿಸುತ್ತಾರೆ. ಗುಣಮಟ್ಟದ ಕಾಲೇಜುಗಳನ್ನು ಸ್ಥಾಪಿಸಬೇಕು ಹೊರತು ವಿವಿಗಳನ್ನಲ್ಲ. ಹೆಸರು ನೋಡಿ ಆಯ್ಕೆ ಮಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವ ವಿವಿಗೆ ಸೇರಿಸುತ್ತಾರೆ ಎಂದರು.

Previous articleಕನ್ನಡ ವಿವಿ 33ನೇ ನುಡಿಹಬ್ಬ: ಮೂರು ಜನ ಗಣ್ಯರಿಗೆ ನಾಡೋಜ ಪದವಿ
Next articleರಜೆ ನೀಡದ್ದಕ್ಕೆ ಸಾರಿಗೆ ಬಸ್ಸಿನಲ್ಲೇ ನೇಣಿಗೆ ಶರಣಾದ ಚಾಲಕ