ಎಲ್ಲಾ ಪಾಕ್ ಪ್ರಜೆಗಳ ವೀಸಾ ರದ್ದು

ಪಹಲ್ಗಾಮ್ ಉಗ್ರ ದಾಳಿ ಬೆನ್ನಲ್ಲೇ ಸಾರ್ಕ್ ವಿನಾಯಿತಿ ವೀಸಾದಡಿ ಭಾರತದಲ್ಲಿರುವ ಪಾಕಿಗಳಿಗೆ ಭಾರತ ಬಿಡುವಂತೆ ಬುಧವಾರ ಸೂಚನೆ ನೀಡಿದ್ದ ಕೇಂದ್ರ ಸರ್ಕಾರ, ಗುರುವಾರ ಮತ್ತೊಂದು ಮಹತ್ವದ ಘೋಷಣೆ ಮಾಡಿದೆ. ದೇಶದಲ್ಲಿರುವ ಎಲ್ಲ ಪಾಕ್ ಪ್ರಜೆಗಳ ವೀಸಾಗಳನ್ನು ರದ್ದು ಮಾಡಿ ಆದೇಶ ಹೊರಡಿಸಲಾಗಿದ್ದು, ೩ ದಿನಗಳಲ್ಲಿ ಇದು ಜಾರಿಗೆ ಬರಲಿದೆ ಎಂದು ತಿಳಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಇಲಾಖೆ, ದೇಶದಲ್ಲಿರುವ ಎಲ್ಲಾ ಪಾಕಿಗಳ ವೀಸಾ ಏ.೨೭ರಿಂದ ರದ್ದಾಗಲಿದೆ. ಹಾಗಾಗಿ ಅವರೆಲ್ಲ ೭೨ ಗಂಟೆಯಲ್ಲಿ ಭಾರತ ಬಿಟ್ಟು ತಮ್ಮ ದೇಶಕ್ಕೆ ಮರಳಬೇಕು ಎಂದು ತಿಳಿಸಿದೆ. ಇದರಿಂದ ಭಾರತಕ್ಕೆ ಮದುವೆಯಾಗಿ ಬಂದ ಪಾಕಿಸ್ತಾನದ ಹೆಣ್ಣುಮಕ್ಕಳಿಗೆ ಸಂಕಷ್ಟ ಎದುರಾಗಲಿದ್ದು, ವಲಸೆ ಬಂದ ಹಿಂದೂಗಳಿಗೂ ಕಂಟಕ ಎದುರಾಗಬಹುದು ಎನ್ನಲಾಗುತ್ತಿದೆ.