ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಮತ್ತೆ ದುಬಾರಿ

0
13

ನವದೆಹಲಿ: ವಾಣಿಜ್ಯ ಎಲ್‌ಪಿಜಿಯ ರಿಟೇಲ್ ದರವನ್ನು ಡಿಸೆಂಬರ್ 1ರಿಂದ ಪ್ರತಿ ಸಿಲಿಂಡರ್‌ಗೆ 21 ರೂಪಾಯಿಗಳಷ್ಟು ಹೆಚ್ಚಿಸಿದೆ.
ಪ್ರತಿ ತಿಂಗಳ ಮೊದಲ ದಿನದಂದು ಗೃಹ ಬಳಕೆಯ ಹಾಗೂ ವಾಣಿಜ್ಯ ಎಲ್‌ಪಿಜಿ ದರವನ್ನು ಪರಿಷ್ಕರಣೆ ಮಾಡಲಾಗುತ್ತದೆ. ಈ ತಿಂಗಳು ಕೂಡಾ ಮೊದಲ ದಿನ ವಾಣಿಜ್ಯ ಬಳಕೆಯ ಎಲ್‌ಪಿಜಿ ಬೆಲೆಯನ್ನು ಏರಿಸಲಾಗಿದೆ. ಕಳೆದ ತಿಂಗಳು ಕೂಡಾ ವಾಣಿಜ್ಯ ಎಲ್‌ಪಿಜಿ ಬಳಕೆದಾರರಿಗೆ ತೈಲ ಸಂಸ್ಥೆಗಳು ಶಾಕ್ ನೀಡಿದೆ. ವಾಣಿಜ್ಯ ಎಲ್‌ಪಿಜಿ ದರವನ್ನು ಹೆಚ್ಚಳ ಮಾಡಲಾಗಿದ್ದರೂ ಕೂಡಾ ಗೃಹ ಬಳಕೆಗೆ ಬಳಸಲಾಗುವ 14.2 ಕೆಜಿ ಎಲ್‌ಪಿಜಿ ದರವನ್ನು ಮಾತ್ರ ಹೆಚ್ಚಳ ಮಾಡಲಾಗಿಲ್ಲ.

Previous article15 ಶಾಲೆಗಳಿಗೆ ಬಾಂಬ್ ಬೆದರಿಕೆ
Next articleವಕೀಲನ ಮೇಲೆ ಹಲ್ಲೆ : ಪಿಎಸ್‌ಐ ಸೇರಿ 6 ಪೊಲೀಸರ ಅಮಾನತು