ಎರಡು ರಾಜ್ಯಗಳ ಪ್ರತಿಷ್ಟೆ‌ಯ ‘ಹರಕೆ’ ಕೋಣ

0
21

ಕೋಣವನ್ನು ಪಡೆಯಲು ಡಿಎನ್‌ಎ ಪರೀಕ್ಷೆಗೆ ಪಟ್ಟು

ಬಳ್ಳಾರಿ: ಕೆಲ ವರ್ಷಗಳ ಹಿಂದಯೇ ದೇವಿ ಹರಕೆಗಾಗಿ ಬಿಟ್ಟ ಕೋಣ ಈಗ ಎರಡು ರಾಜ್ಯಗಳಿಗೆ ಪ್ರತಿಷ್ಠೆಯಾಗಿದ್ದು, ಕೋಣವನ್ನು ಪಡೆಯಲು ಡಿಎನ್‌ಎ ಪರೀಕ್ಷೆಗೆ ಪಟ್ಟು ಹಿಡಿದ್ದಾರೆ.
ತಾಲೂಕಿನ ಬೊಮ್ಮನಹಹಾಳ್ ಗ್ರಾಮದ ಸುಂಕಲ್ಲಮ್ಮ ದೇವಿ, ಆಂಧ್ರದ ಮೆದಹಾಳ್ ಗ್ರಾಮದ ದ್ಯಾವಮ್ಮ ದೇವಿಯ ಜಾತ್ರೆ ಮುಂದಿನ ಜನವರಿ ತಿಂಗಳಲ್ಲಿ ನಡೆಯುತ್ತಿದ್ದು ಸದ್ಯ ಈ ಕೋಣವನ್ನೆ ಹರಕೆ ನೀಡಲು ಎರಡು ಗ್ರಾಮದವರು ಕೆಲ ವರ್ಷಗಳ ಹಿಂದಯೇ ತಿರ್ಮಾನಿಸಿದ್ದಾರೆ. ಆದರೆ, ಸದ್ಯ ಆಂಧ್ರದ ಮೆದಹಾಳ್‌ನಲ್ಲಿ ಕೋಣವಿದ್ದು ದ್ಯಾವಮ್ಮ ದೇವರಿಗೆ ಬಿಟ್ಟ ಕೋಣವನ್ನು ದೇವಿಗೆ ಅರ್ಪಿಸುತ್ತವೆ ಎಂಬುದಾಗಿ ಪಟ್ಟು ಹಿಡಿದು ಕಟ್ಟಿ ಹಾಕಿಕೊಂಡು ಎಂಟಕ್ಕೂ ಅಧಿಕ ಜನ ಕಾವಲು ಕಾಯುತ್ತಿದ್ದಾರೆ. ಇದಕ್ಕೆ ಬೊಮ್ಮನಹಾಳ್ ಗ್ರಾಮದವರು, ಈ ಕೋಣ ಕೆಲ ವರ್ಷಗಳ ಹಿಂದಯೇ ಸುಂಕಲ್ಲಮ್ಮ ದೇವಿಗೆ ಬಿಡಲಾಗಿತ್ತು, ಹರಕೆಯಂತೆ ಸುಂಕಲಮ್ಮಗೆ ಅರ್ಪಿಸುವೆ ಎಂದು ಹಠ ಹಿಡಿರುವುದಲ್ಲದೆ, ದೇವಿ ಮೇಲೆ ಅಣೆ ಮಾಡಿಸಿ ಡಿಎನ್‌ಎ ಪರೀಕ್ಷೆಗೆ ಒಳಪಡಿಸಿ ಎಂಬುದಾಗಿ ಸವಾಲು ಹಾಕಿದ್ದಾರೆ. ಹನ್ನೇರಡು ವರ್ಷಗಳ ಬಳಿಕ ಮೆದಹಾಳ್ ಹಾಗೂ ಐದು ವರ್ಷಗಳ ನಂತರ ಬೊಮ್ಮನಹಾಳ್ ಗ್ರಾಮದಲ್ಲಿ ದೇವಿ ಜಾತ್ರೆ ನಡೆಯುತ್ತಿದ್ದು ಇಬ್ಬರಿಗೂ ಈ ಕೋಣವೊಂದು ಪ್ರತಿಷ್ಠೆಯಾಗಿದೆ. ಇದರಿಂದ ಕರ್ನಾಟಕ ಹಾಗೂ ಆಂಧ್ರ ರಾಜ್ಯಗಳ ಅಧಿಕಾರಿಗಳಿಗೆ ಈ ಸಮಸ್ಯೆ ಪರಿಹಾರಿಸಲು ದೊಡ್ಡ ತಲೆನೋವುಯಾಗಿ ಪರಿಣಮಿಸಿದೆ.

Previous articleಸಾಹಿತ್ಯದ ಮೂಲಕ ರಾಜಕಾರಣ ಬದಲಾವಣೆ ಸಾಧ್ಯ
Next articleಬೈಕ್‌ಗೆ ಲಾರಿ ಡಿಕ್ಕಿ: ಹಿಂಬದಿಯಲ್ಲಿ ಕುಳಿತ ಮಹಿಳೆ ಸಾವು