ಬಳ್ಳಾರಿ: ಬಳ್ಳಾರಿ ಸೆಂಟ್ರಲ್ ಜೈಲ್ ಬಂಧಿಯಾಗಿರುವ ನಟ ದರ್ಶನ್ ಭೇಟಿಗೆ ಪತ್ನಿ ವಿಜಯಲಕ್ಷ್ಮೀ ಗುರುವಾರ ಆಗಮಿಸಿದರು.
ಕಳೆದ ಶನಿವಾರ ಜೈಲಿಗೆ ಭೇಟಿ ನೀಡಿದ್ದ ವಿಜಯಲಕ್ಷ್ಮೀ ದರ್ಶನ್ ಜತೆ ಅರ್ಧ ಗಂಟೆಗಳ ಕಾಲ ಮಾತನಾಡಿ ಕುಶಲೋಪರಿ ವಿಚಾರಿಸಿದ್ದರು. ಈಗ ಎರಡನೇ ಬಾರಿಗೆ ದರ್ಶನ್ ಸಹೋದರ ದಿನಕರ್ ತೂಗದೀಪ ಜತೆ ಆಗಮಿಸಿದರು. ಜೈಲಿನ ವಿಸಿಟರ್ಸ್ ಕೊಠಡಿಯಲ್ಲಿ ಕುಳಿತಿರುವ ವಿಜಯಲಕ್ಷ್ಮೀ ದರ್ಶನ್ ಭೇಟಿಗೆ ಕಾಯುತ್ತಿದ್ದಾರೆ.