Home Advertisement
Home ಅಪರಾಧ ಎಟಿಎಂ ಕಾರ್ಡ ಅದಲಿ ಬದಲಿ: ಹಣ ತೆಗೆದುಕೊಂಡು ಮೋಸ

ಎಟಿಎಂ ಕಾರ್ಡ ಅದಲಿ ಬದಲಿ: ಹಣ ತೆಗೆದುಕೊಂಡು ಮೋಸ

0
141

ಇಳಕಲ್ : ಮುದಗಲ್ಲ ಪಟ್ಟಣದ ಮಲ್ಲಯ್ಯ ಸಿದ್ದಯ್ಯ ಗಡಾದ ಎಂಬುವವರ ಎಟಿಎಂ ಬದಲಿಸಿ ಅವರ ಬ್ಯಾಂಕ್ ಖಾತೆಯಿಂದ ೭೫ ಸಾವಿರ ರೂ ಪಂಗನಾಮ ಹಾಕಿದ ಘಟನೆ ನಗರದಲ್ಲಿ ನಡೆದಿದೆ.
ಮಲ್ಲಯ್ಯ ಇಲ್ಲಿನ ಕೆನರಾ ಬ್ಯಾಂಕಿನ ಎಟಿಎಂದಿಂದ ೨೦ ಸಾವಿರ ಹಣ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದರು ಆಗ ಇವರ ಹಿಂದೆ ಮೂರು ಜನ ಅಪರಿಚಿತರು ನಿಂತುಕೊಂಡು ಇವರ ಚಟುವಟಿಕೆಗಳನ್ನು ಗಮನಿಸಿದ್ದಾರೆ. ಮಲ್ಲಯ್ಯ ಅವರಿಗೆ ಹಣ ಬಾರದೇ ತಡಮಾಡಿ ಎಟಿಎಂ ಕಾರ್ಡ ಹೊರಬಂದಾಗ ಚಾಲಾಕಿತನದಿಂದ ಅವರ ಕಾರ್ಡನ್ನು ಬದಲಿಸಿ ಅಂತಹದೇ ಬೇರೆ ಕಾರ್ಡ ಕೊಟ್ಟಿದ್ದಾರೆ ಊರಿಗೆ ಹೋಗುವ ಅವಸರದಲ್ಲಿ ಇದ್ದ ಮಲ್ಲಯ್ಯ ಏನೂ ನೋಡದೇ ಅವರು ಬದಲಿಸಿದ ಕಾರ್ಡು ತೆಗೆದುಕೊಂಡು ತಮ್ಮ ಊರಿಗೆ ಹೋಗಿದ್ದಾರೆ ನಂತರ ಅಂದು ಸಂಜೆಯಿಂದ ಮರುದಿನದ ಬೆಳಗಿನವರೆಗೂ ೭೫ ಸಾವಿರ ರೂಗಳನ್ನು ಇವರ ಖಾತೆಯಿಂದ ಆ ಮೂವರು ಲಪಟಾಯಿಸಿದ್ದಾರೆ. ಇಳಕಲ್ ಶಹರ್ ಪೋಲಿಸ್ ಠಾಣೆಗೆ ಬಂದ ಮಲ್ಲಯ್ಯ ತಮಗಾದ ಮೋಸವನ್ನು ಪೋಲಿಸರಿಗೆ ವಿವರಿಸಿ ಅಂದು ಎಟಿಎಂದಲ್ಲಿ ಆದ ಸನ್ನಿವೇಶ ವಿವರಿಸಿದ್ದಾರೆ. ಹಿಂದೆ ನಿಂತು ಮಲ್ಲಯ್ಯನ ಚಟುವಟಿಕೆ ಗಮನಿಸಿ ಆತನ ಹಣ ಡ್ರಾ ಮಾಡಿಕೊಳ್ಳುವ ನಂಬರ್‌ ನೆನಪಲ್ಲಿ ಇಟ್ಟುಕೊಂಡು ಟೋಪಿ ಹಾಕಿದ್ದಾರೆ. ಪ್ರಕರಣ ದಾಖಲಿಸಿ ಕೊಂಡಿರುವ ಪೋಲಿಸರು ತನಿಖೆ ನಡೆಸಿದ್ದಾರೆ.