ಎಟಿಎಂ ಕಾರ್ಡ್‌ ಅದಲು ಬದಲು: ಮೋಸ

0
6

ಕುಷ್ಟಗಿ: ನಿವೃತ್ತ ನೌಕರನ ಕಣ್ಣು ಸರಿಯಾಗಿ ಕಾಣದೆ ಇರುವುದನ್ನು ಗಮನಿಸಿದ ಅಪರಿಚಿತ ವ್ಯಕ್ತಿ ನಿವೃತ್ತ ನೌಕರನಿಗೆ ಸೇರಿದ ಎಟಿಎಂ ಬದಲಾವಣೆ ಮಾಡುವ ಮುಖಾಂತ ಎಟಿಎಂ ಕಾರ್ಡನಲ್ಲಿ ಇದ್ದ 69 ಸಾವಿರ ರೂ ಡ್ರಾ ಮಾಡಿಕೊಂಡು ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.
ಪಟ್ಟಣದ ಮಾರುತಿ ವೃತ್ತದ ಬಳಿ ಇರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂಗೆ ಕಣ್ಣು ಸರಿಯಾಗಿ ಕಾಣದ ನಿವೃತ್ತ ನೌಕರ ಬಂದನೇವಾಜ್ ತನ್ನ ಖಾತೆಯಲ್ಲಿದ್ದ ಹಣವನ್ನು ಡ್ರಾ ಮಾಡಿಕೊಳ್ಳಲು ಬಂದಿದ್ದಾನೆ. ಆ ಸಂದರ್ಭದಲ್ಲಿ ಸ್ಥಳದಲ್ಲಿ ಇದ್ದ ಅಪರಿಚಿತ ವ್ಯಕ್ತಿಯ ಸಹಾಯ ಕೇಳಿದ್ದಾರೆ, ಸಹಾಯ ಮಾಡಲು ಬಂದಿರುವ ವ್ಯಕ್ತಿ ತನ್ನ ಎಟಿಎಂ ಕಾರ್ಡನ್ನು ನಿವೃತ್ತ ನೌಕರನಿಗೆ ನೀಡಿ ನಿವೃತ್ತ ನೌಕರನ ಎಟಿಎಂ ಅನ್ನು ತೆಗೆದುಕೊಂಡು ಹೋಗಿದ್ದಾನೆ. ಇದಾದ ಬಳಿಕ ಎಟಿಎಂ ತೆಗೆದುಕೊಂಡು ಹೋಗಿರುವ ಅಪರಿಚಿತ ವ್ಯಕ್ತಿ ಬಂದನೇವಾಜ್ ಅವರ ಉಳಿತಾಯ ಖಾತೆಯ ಎಟಿಎಂನಿಂದ ೯೫೦೦ ರೂಗಳಂತೆ ನಾಲ್ಕು ಬಾರಿ ಅಂದರೆ ೨೦,೮೦೦ ರೂ ಹಾಗೂ ೧೦ ಸಾವಿರ ರೂ.,೧ ಸಾವಿರ ನಂತೆ ಬರೋಬ್ಬರಿ ೬೯ ಸಾವಿರ ರೂ ಮಾಡಿಕೊಂಡಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ನಿವೃತ್ತ ನೌಕರ ಬಂದೇನವಾಜ್ ಕೂಡಲೇ ಬ್ಯಾಂಕಿಗೆ ತೆರಳಿ ಎಟಿಎಂ ಕಾರ್ಡ್ ಬ್ಲಾಕ್ ಮಾಡ್ಸಿದ್ದಾರೆ ಈ ಘಟನೆ ಕುರಿತು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಪ್ರಶ್ನೆ ಪತ್ರಿಕೆ ಸೋರಿಕೆ: ವಿದ್ಯಾರ್ಥಿಗಳಲ್ಲಿ ಆತಂಕ
Next articleನಾಮಕಾವಸ್ತೆ ಅಧ್ಯಕ್ಷಗಿರಿ ಇಟ್ಟುಕೊಂಡು ಏನು ಮಾಡುತ್ತೀರಿ?