ಎಚ್.ಕೆ ಪಾಟೀಲರಿಗೆ ಮುಖ್ಯಮಂತ್ರಿ ಯೋಗ ಕೂಡಿ ಬರಲಿ ಎಂದ ಸ್ವಾಮೀಜಿ

0
14

ಗದಗ: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಹುಯಿಲೆದ್ದಿರುವ ಮಧ್ಯೆಯೇ ಕಾನೂನು ಸಚಿವ ಡಾ. ಎಚ್.ಕೆ ಪಾಟೀಲರಿಗೆ ಮುಖ್ಯಮಂತ್ರಿ ಯೋಗ ಕೂಡಿ ಬರಲಿಯೆಂದು ಹೇಳುವ ಮೂಲಕ ಚಿತ್ರದುರ್ಗ ಭೋವಿ ಗುರುಪೀಠ ಸಂಸ್ಥಾನ ಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸಂಚಲನ ಮೂಡಿಸಿದ್ದಾರೆ.
ನಗರದಲ್ಲಿ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಭಾನುವಾರ ನಡೆದ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಈ ಹಿಂದೆಯೇ ಎಚ್.ಕೆ. ಪಾಟೀಲರಿಗೆ ಮುಖ್ಯಮಂತ್ರಿಯಾಗುವ ಯೋಗವಿತ್ತು. ರಾಜಕೀಯ ಕಾರಣಗಳಿಂದಾಗಿ ಆಗಲಿಲ್ಲ. ಎಸ್.ಎಂ.ಕೃಷ್ಣ ಸರಕಾರದಲ್ಲಿ ಅತ್ಯಂತ ಪ್ರಭಾವಿಯಾಗಿದ್ದ ಡಾ.ಎಚ್.ಕೆ.ಪಾಟೀಲರ ಹೆಸರು ಅವರ ನಂತರದ ಸ್ಥಾನದಲ್ಲಿತ್ತು. ಎಸ್.ಎಂ.ಕೃಷ್ಣರ ನಂತರ ಸಿಎಂ ಹುದ್ದೆ ರೇಸ್‌ನಲ್ಲಿ ಮಂಚೂಣಿಯಲ್ಲಿತ್ತು. ಮತ್ತೆ ಕಾರಣಾಂತರಗಳಿಂದ ಆಗಲಿಲ್ಲವೆಂದು ಹೇಳಿದರು.
ಸಚಿವ ಎಚ್.ಕೆ. ಪಾಟೀಲರಿಗೆ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆ, ಯೋಗವಿದೆ. ಇಷ್ಟರಲ್ಲಿಯೇ ಎಚ್.ಕೆ. ಪಾಟೀಲರು ಎರಡು ಮೂರು ಬಾರಿ ಸಿಎಂ ಆಗಿರುತ್ತಿದ್ದರು. ತಡವಾಗಿಯಾದ್ರೂ ಎಚ್.ಕೆ. ಪಾಟೀಲರಿಗೆ ಸಿಎಂ ಯೋಗ ಕೂಡಿ ಬರಲಿಯೆಂದು ನೆರೆದ ಸಹಸ್ರಾರು ಜನರ ಕರತಾಡನದ ಮಧ್ಯೆ ಘೋಷಿಸಿದರು.

Previous articleಕನ್ನಡ ಬರೆಯಲು ತಡಕಾಡಿದ ತಂಗಡಗಿ
Next articleಕಾಮುಕ ಅಮ್ಜದ್‌ಗೆ ಗಲ್ಲುಶಿಕ್ಷೆ ವಿಧಿಸಲು ಒತ್ತಾಯ: ೬ರಂದು ರಾಜ್ಯಾದ್ಯಂತ ಪ್ರತಿಭಟನೆ