ಎಚ್‌ಡಿಕೆ ಸುಮ್ಮನಿದ್ದರೆ ಕ್ಷೇಮ

0
29

ಬೆಂಗಳೂರು: ಭೂ ಒತ್ತುವರಿಗೆ ಸಂಬಂಧಿಸಿದಂತೆ ಸರ್ಕಾರವೇನೂ ಕುಮಾರಸ್ವಾಮಿ ವಿರುದ್ಧ ಕೇಸ್ ಹಾಕಿಲ್ಲ. ಆದರೂ ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ. ಸುಮ್ಮನಿದ್ದರೆ ಅವರಿಗೂ ಕ್ಷೇಮ ಎಂದು ಎಚ್‌ಡಿಕೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾವೇಕೆ ಅವರ ವಿರುದ್ಧ ದ್ವೇಷದ ರಾಜಕಾರಣ ಮಾಡುವುದು. ಸರ್ಕಾರ ಅವರ ಮೇಲೆ ಭೂ ಒತ್ತುವರಿ ಕೇಸ್ ಹಾಕಿಲ್ಲ. ಕೇತಗಾನಹಳ್ಳಿ ಜಮೀನು ವಿಚಾರವಾಗಿ ಕೇಸ್ ದಾಖಲಿಸಿರುವುದು ಎಸ್.ಆರ್ ಹಿರೇಮಠ್ ಅವರು. ಕೋರ್ಟ್ ಆದೇಶದಂತೆ ಅಧಿಕಾರಿಗಳು ಕೆಲಸ ಮಾಡಿದ್ದು, ನಾವು ಹೇಗೆ ದ್ವೇಷ ರಾಜಕಾರಣ ಮಾಡಿದ್ದೇವೆ ಎಂದು ಪ್ರಶ್ನಿಸಿದರು.

Previous articleಡಿಕೆಶಿ ರಾತ್ರಿ 2 ಗಂಟೆಗೆ ಹನಿಟ್ರ್ಯಾಪ್ ಸಭೆ ಮಾಡುತ್ತಾರೆ
Next articleತ್ರಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ತಾತಾ, ಮೊಮ್ಮಗ ಸಾವು