ನವದೆಹಲಿ: ಆಮ್ ಆದ್ಮಿ ಪಕ್ಷವು ‘ಎಎಪಿ ಕಾ ರಾಮ್‌ರಾಜ್ಯ’ ಎಂಬ ಜಾಲತಾಣವನ್ನು ಆರಂಭಿಸಿದೆ.
ದೆಹಲಿಯಲ್ಲಿ ಮೊದಲ ಹಂತದ ಮತದಾನವು ಶುಕ್ರವಾರ ನಡೆಯಲಿದ್ದು ಇದರ ಮಧ್ಯೆ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ವೆಬ್‌ಸೈಟ್ ಬಿಡುಗಡೆಯಾಗಿದೆ, ಇನ್ನು ಈ ಕುರಿತಂತೆ ಮಾತನಾಡಿರುವ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ವೆಬ್‌ಸೈಟ್ ಎಎಪಿಯ ‘ರಾಮ ರಾಜ್ಯ’ ಪರಿಕಲ್ಪನೆ ಮತ್ತು ಪಕ್ಷದ ಸರ್ಕಾರ ಮಾಡಿದ ಕೆಲಸಗಳನ್ನು ಬಿಂಬಿಸುತ್ತದೆ ಎಂದು ಹೇಳಿದರು. ‘ರಾಮರಾಜ್ಯ’ ಸಾಕ್ಷಾತ್ಕಾರಕ್ಕಾಗಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಕಳೆದ 10 ವರ್ಷಗಳಲ್ಲಿ ಉತ್ತಮವಾದ ಶಾಲೆಗಳು, ಮೊಹಲ್ಲಾ ಚಿಕಿತ್ಸಾಲಯಗಳು, ಉಚಿತ ನೀರು ಮತ್ತು ವಿದ್ಯುತ್ ಮತ್ತು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆಯನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ.
‘ಎಎಪಿ ಕಾ ರಾಮ್‌ರಾಜ್ಯ’ ಜಾಲತಾಣ: https://aapkaramrajya.com/