ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

0
22

ಕಲಬುರಗಿ: ಕಂಜೆನಿಟಲ್ ಡಯಾಫ್ರಾಗ್ಮಾಟಿಕ್ ಹರ್ನಿಯಾ' ತೊಂದರೆ ಅಂದರೆ ಎದೆಗೂಡು ಮತ್ತು ಹೊಟ್ಟೆಯನ್ನು ಬೇರ್ಪಡಿಸುವ ಹೊದಿಕೆಯಲ್ಲಿ ರಂಧ್ರವಿದ್ದರಿಂದಾಗಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮೂರು ತಿಂಗಳ ಮಗುವಿಗೆ ನಗರದಯಶೋಧಾ ಮಕ್ಕಳ ಆಸ್ಪತ್ರೆ’ಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿ ಗುಣಪಡಿಸಲಾಗಿದೆ.

ಆಸ್ಪತ್ರೆಯ ಮುಖ್ಯಸ್ಥರೂ ಆದ ನಗರದ ಖ್ಯಾತ ಮಕ್ಕಳತಜ್ಞ ಡಾ. ಪ್ರಶಾಂತ್ ಕುಲಕರ್ಣಿ ಅವರ ನೇತೃತ್ವದಲ್ಲಿ ಮಕ್ಕಳ ಶಸ್ತ್ರಚಿಕಿತ್ಸಕರಾದ ಡಾ. ಕೃಷ್ಣ ಇಂದುವಾಸಿ, ಡಾ. ನಂದಕಿಶೋರ್ ಅವರ ತಂಡವು ಮಗುವಿಗೆ ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ತೊಂದರೆಯನ್ನು ಸರಿಪಡಿಸಿದೆ. ಹಿರಿಯ ತಜ್ಞ ಡಾ. ಶ್ರೀಕಾಂತ ಎಸ್ ಡಬ್ಲೂ., ಅರವಳಿಕೆ ತಜ್ಞ ಡಾ. ಮಲ್ಲಿಕಾರ್ಜುನ್, ಮಕ್ಕಳ ತಜ್ಞರಾದ ಡಾ. ದೀಪಾ ಮೂಲಗೆ, ಡಾ. ಪ್ರಶಾಂತ್ ಚವ್ಹಾಣ್, ಡಾ. ಅಜೀಂ, ಡಾ. ಸಂತೋಷ, ಡಾ. ಕಿರಣ, ಡಾ. ಪ್ರಣಯ್ ಅವರೂ ತಂಡದಲ್ಲಿದ್ದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಗುವಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿರುವ ಬಗ್ಗೆ ವೈದ್ಯರು ವಿವರಿಸಿದರು.
ವಿವರ: ಅಕ್ಕಲಕೋಟೆಯ ಬಾಲಾಪುರದ ಮೂರು ತಿಂಗಳ ಮಗು ಚೇತನ್ ಹುಟ್ಟಿದಾಗಿನಿಂದಲೂ ನೆಗಡಿ, ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು. ನ್ಯುಮೋನಿಯಾ ಸಹ ಇತ್ತು. ಮೂರು ತಿಂಗಳು ಕೆಲವು ಕಡೆ ತೋರಿಸಿದರೂ ಸಮಸ್ಯೆ ಹಾಗೆಯೇ ಇತ್ತು. ಆ ಬಳಿಕ ಕಲಬುರಗಿಯ ಯಶೋಧಾ ಮಕ್ಕಳ ಆಸ್ಪತ್ರೆಗೆ ಬಂದು ಡಾ. ಪ್ರಶಾಂತ್ ಕುಲಕರ್ಣಿ ಅವರಿಗೆ ತೋರಿಸಿದರು. ಅವರು ತಪಾಸಣೆ ಮಾಡಿದಾಗ ಮಗುವಿಗೆ ಕಂಜೆನಿಟಲ್ ಡಯಾಫ್ರಾಗ್ಮಾಟಿಕ್ ಹರ್ನಿಯಾ' ತೊಂದರೆ ಅಂದರೆ ಎದೆಗೂಡು ಮತ್ತು ಹೊಟ್ಟೆಯನ್ನು ಬೇರ್ಪಡಿಸುವ ಹೊದಿಕೆಯಲ್ಲಿ ರಂಧ್ರವಿರುವುದು ಪತ್ತೆಯಾಯಿತು. ಅಂದರೆ ಈ ರಂಧ್ರದಿಂದಾಗಿ ಕರುಳು ಮತ್ತು ಹೊಟ್ಟೆಯಲ್ಲಿರಬೇಕಾಗಿದ್ದವು ಎದೆಗೂಡು, ಹೃದಯಕ್ಕೆ ಸೇರಿದ್ದವು. ಕಳೆದ ನವೆಂಬರ್ 18ರಂದು ಆಸ್ಪತ್ರೆಗೆ ದಾಖಲಾದ ಮಗುವಿಗೆ ಎಂಟು ದಿನಗಳ ಬಳಿಕ ದಿ. 26ರಂದು ಉದರದರ್ಶಕ ಚಿಕಿತ್ಸೆ ಅಂದರೆ ಲ್ಯಾಪ್ರೋಸ್ಕೋಪಿಕ್ ಡಿಎಚ್ ರಿಪೇರ್ ಸರ್ಜರಿ ಮೂಲಕ ಮಗುವಿನ ಎದೆಗೂಡು, ಹೃದಯದಲ್ಲಿದ್ದದನ್ನು ಕರುಳಿಗೆ ತಂದು ರಂಧ್ರವನ್ನು ಯಶಸ್ವಿಯಾಗಿ ಮುಚ್ಚಿ ಸರಿಪಡಿಸಲಾಯಿತು. ಈಗ ಮಗು ಚೇತರಿಸಿಕೊಂಡಿದ್ದು ಉಸಿರಾಟದ ತೊಂದರೆಯಿಂದ ಮುಕ್ತಗೊಂಡಿದೆ. ಮಗುವನ್ನು ಆಸ್ಪತ್ರೆಯಲ್ಲೇ ಎಂಟು ದಿನಗಳ ಕಾಲ ನಿಗಾದಲ್ಲಿರಿಸಿ ಆರೈಕೆ ಮಾಡಲಾಗಿದ್ದು, ಶುಕ್ರವಾರ ಡಿಸ್ಚಾರ್ಜ್ ಮಾಡಲಾಯಿತು. ದೇವರು ಮತ್ತು ವೈದ್ಯರಿಗೆ ಧನ್ಯವಾದಗಳು, ನಮ್ಮ ಮಗು ಉಸಿರಾಟದ ತೊಂದರೆಯಿಂದ ಚೇತರಿಸಿಕೊಂಡು ಬದುಕುಳಿದಿರುವುದು ನಮಗೆಲ್ಲ ನೆಮ್ಮದಿಯನ್ನುಂಟು ಮಾಡಿದೆ’ ಎಂದು ತಂದೆ-ತಾಯಿ ತಿಳಿಸಿದರು. ಖ್ಯಾತ ಮಕ್ಕಳತಜ್ಞ ಡಾ. ಶ್ರೀಕಾಂತ ಎಸ್.ಡಬ್ಲೂ. ಅವರೂ ಪತ್ರಿಕಾಗೋಷ್ಠಿಯಲ್ಲಿದ್ದರು.

Previous articleಸೈಬರ್ ವಂಚಕನ ಬಂಧನ
Next articleಕಟಾವು ಯಂತ್ರ ಮತ್ತು ಕಾರಿನ ನಡುವೆ ಭೀಕರ ಅಪಘಾತ: ಐವರು ಸಾವು