ಬಳ್ಳಾರಿ: ಬಳ್ಳಾರಿಯ ಮಹಾನಗರ ಪಾಲಿಕೆ, ತಾಲೂಕು ಕಚೇರಿ ಸೇರಿ ವಿವಿಧ ಇಲಾಖೆಗಳ ಕಚೇರಿಗೆ ಭೇಟಿ ನೀಡಿದ ಉಪಲೋಕಾಯುಕ್ತ ಬಿ.ವೀರಪ್ಪ ಭೇಟಿ ನೀಡಿ ಹಲವು ಕಡತಗಳನ್ನು ಪರಿಶೀಲನೆ ಮಾಡಿದರು.
ಮಹಾನಗರ ಪಾಲಿಕೆಗೆ ಭೇಟಿ ನೀಡಿ ಟ್ರೇಡಿಂಗ್ ಲೈಸೆನ್ಸ್, ಅನಧಿಕೃತ ಕಟ್ಟಡ ನಿರ್ಮಾಣದ ವಿರುದ್ದ ಕ್ರಮ ಕೈಗೊಂಡ ಬಗ್ಗೆ ಪರಿಶೀಲನೆ ನಡೆಸಿದರು. ಪಾಲಿಕೆ ಆಯುಕ್ತರು ಸೇರಿ ಇತರೆ ಅಧಿಕಾರಿಗಳಿಂದ ಸರಿಯಾದ ಮಾಹಿತಿ ಸಿಗದ ಕಾರಣ ತರಾಟೆಗೆ ತೆಗೆದುಕೊಂಡರು. ಸಿಬ್ಬಂದಿಗಳ ಹಾಜರಿ ಪುಸ್ತಕ, ಕ್ಯಾಶ್ ರಿಜಿಸ್ಟ್ರಾರ್ ಸರಿಯಾಗಿ ನಿರ್ವಹಣೆ ಮಾಡದೇ ಇರುವ ಬಗ್ಗೆ ಸಿಡಿಮಿಡಿಗೊಂಡರು. ಸಿಬ್ಬಂದಿಗಳ ಮೊಬೈಲ್ ಪಡೆದು ಫೋನ್ ಪೇ ಚೆಕ್ ಮಾಡಿ ಹಣದ ವಹಿವಾಟುಗಳನ್ನು ಪರಿಶೀಲನೆ ಮಾಡಿದರು. ತಹಸಿಲ್ ಕಚೇರಿಗೂ ಭೇಟಿ ನೀಡಿ ಆದಾಯ ಪ್ರಮಾಣ ಪತ್ರ ನೀಡುವುದು, ಮ್ಯುಟೇಶನ್ ನೀಡುವುದರಲ್ಲಿ ಲೋಪದೋಷವಾಗಿದೆ ಎಂದು ತರಾಟೆಗೆ ತೆಗೆದುಕೊಂಡರು. ವಿವಿಧ ಹಂತದ ಲೋಕಾಯುಕ್ತ ಅಧಿಕಾರಿಗಳು ಹಾಜರಿದ್ದರು.