ಉದ್ಯಮಿ ಕಿಡ್ನಾಪ್‌ ಮಾಡಿ 5 ಕೋಟಿ ಬೇಡಿಕೆ ಇಟ್ಟ ಅಪಹರಣಕಾರರು

ಬೆಳಗಾವಿ: ಉದ್ಯಮಿಯನ್ನು ಅಪಹರಣ ಮಾಡಿದ ದುಷ್ಕರ್ಮಿಗಳು 5 ಕೋಟಿ ರೂ. ಬೇಡಿಕೆ ಇಟ್ಟ ಘಟನೆ ನಡೆದಿದೆ.
ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ ಬಸವರಾಜ ನೀಲಪ್ಪ ಅಂಬಿ(48) ಎಂಬ ವ್ಯಕ್ತಿಯನ್ನು ಅಪಹರಿಸಲಾಗಿದ್ದು. ಫೆ.14 ರಂದು ರಾತ್ರಿ ಬಸವರಾಜ್ ನನ್ನು ಅಪಹರಣ ಮಾಡಲಾಗಿದೆ. ನಿನ್ನೆ ತಡರಾತ್ರಿ ಐದು ಕೋಟಿ ಹಣವನ್ನು ಕೊಟ್ಟು ‌ಬಸವರಾಜ್ ನನ್ನ ಬಿಡಿಸಿಕೊಂಡು ಹೋಗುವಂತೆ ಅಪಹರಣಕಾರರು ಬ್ಲಾಕ್ ಮೇಲ್ ಮಾಡಿದ್ದಾರೆ ಎನ್ನಲಾಗಿದೆ. ಹಣ ತೆಗೆದುಕೊಂಡು ಬಸವರಾಜ್ ಸಂಬಂಧಿಕರು ಹೇಳಿದ ಸ್ಥಳಕ್ಕೆ ತೆರಳಿದ್ದರು. ಆದರೆ ಅಪಹರಣಕಾರರು ಅಲ್ಲಿಂದ ಪರಾರಿಯಾಗಿ, ನೀವು ಒಬ್ಬರೇ ಬರಬೇಕು. ಹೆಚ್ಚು ಜನರು ಬಂದಲ್ಲಿ ಬಸವರಾಜನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಫೋನ್ ಮಾಡಿದ್ದಾರೆ. ಇದರಿಂದ ಗಾಬರಿಗೊಂಡ ಕುಟುಂಭ ಘಟಪ್ರಭಾ ಠಾಣೆಗೆ ದೂರು ನೀಡಿದ್ದಾರೆ. ಅಪಹಾರಣಕಾರರು ಮಾಡಿರು ಫೋನ್ ಕರೆ ಆಧರಿಸಿ ಲೊಕೇಷನ್ ಪತ್ತೆಗೆ ಪೊಲೀಸರು ಬಲೆಬಿಸಿದ್ದಾರೆ.