ಉತ್ತರಾಖಂಡದಲ್ಲಿ ಕರ್ನಾಟಕದ ನಾಲ್ವರು ಚಾರಣಿಗರ ಸಾವು

0
5

ಬೆಂಗಳೂರು: ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ ನಾಲ್ವರು ಚಾರಣಿಗರು ಉತ್ತರಾಖಂಡದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರಾಖಂಡದ ಸಹಸ್ರತಾಲ್‌ನಲ್ಲಿ ಸಿಕ್ಕಿಬಿದ್ದಿರುವ ಇತರರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವಾಗ 19 ಚಾರಣಿಗರ ಪೈಕಿ ನಾಲ್ವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ದುರಂತದಲ್ಲಿ ಮೃತಪಟ್ಟವರ ಗುರುತು ತಿಳಿದುಬಂದಿಲ್ಲ. ಕರ್ನಾಟಕದ 18 ಮಂದಿ, ಮಹಾರಾಷ್ಟ್ರದ ಒಬ್ಬರು ಮತ್ತು ಮೂವರು ಸ್ಥಳೀಯ ಮಾರ್ಗದರ್ಶಕರನ್ನು ಒಳಗೊಂಡ ಚಾರಣ ತಂಡವು ಮೇ 29 ರಂದು ಸಹಸ್ತ್ರ ತಾಲ್‌ಗೆ ಟ್ರೆಕ್ಕಿಂಗ್ ಯಾತ್ರೆಗೆ ತೆರಳಿದ್ದು, ಜೂನ್ 7 ರಂದು ಹಿಂತಿರುಗಬೇಕು ಎಂದು ಉತ್ತರಕಾಶಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೆಹರ್ಬನ್ ಸಿಂಗ್ ಬಿಶ್ತ್ ತಿಳಿಸಿದ್ದಾರೆ.
ಆದರೆ, ಪ್ರತಿಕೂಲ ಹವಾಮಾನದಿಂದಾಗಿ ತಂಡವು ದಾರಿ ತಪ್ಪಿದೆ ಮತ್ತು ಟ್ರೆಕ್ಕಿಂಗ್ ಏಜೆನ್ಸಿ, ಹಿಮಾಲಯನ್ ವ್ಯೂ ಟ್ರ್ಯಾಕಿಂಗ್ ಏಜೆನ್ಸಿ, ನಾಲ್ವರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ನೀಡಿದೆ.

Previous articleಎರಡಂಕಿಯನ್ನು ದಾಟದ ಕಾಂಗ್ರೆಸ್ ಮುನ್ನೂರು ಗೆದ್ದಂತೆ ಬೀಗುತ್ತಿದೆ
Next articleNDA ಕೂಟದಲ್ಲೇ ಇರುತ್ತೇನೆ: ಚಂದ್ರಬಾಬು ನಾಯ್ಡು