ಉತ್ತರಕನ್ನಡದಲ್ಲಿ ನಿರಂತರ ಮುನ್ನಡೆ ಕಾಯ್ದುಕ್ಕೊಳ್ಳುತ್ತಿರುವ ಕಾಗೇರಿ

0
11

ಕಾರವಾರ: ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮತ ಏಣಿಕೆ ಬಿರುಸಿನಿಂದ ಸಾಗಿದ್ದು, ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಕುಮಟಾದ ಡಾ. ಎ.ವಿ ಬಾಳಿಗಾ ಕಾಲೇಜಿನಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮತ ಏಣಿಕೆ ಆರಂಭಗೊಂಡಿದ್ದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ನಿರಂತರವಾಗಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ 2,05,933 ಹತ್ತಿರದ ಸ್ಪರ್ಧಿಯಾಗಿ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳಕರ್ 1,04,865 ಮತಗಳನ್ನು ಪಡೆದುಕೊಂಡಿದ್ದು 1,01,068 ಭಾರಿ ಮತಗಳ ಅಂತರದದಿಂದ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.
ಇನ್ನು ಮುನ್ನಡೆ ಮಾಹಿತಿ ಪಡೆದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಮತ ಏಣಿಕೆ ವೀಕ್ಷಣೆ ನಡೆಸಿದರು. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಮುನ್ನಡೆಯನ್ನು ಕಾಯ್ದುಕೊಂಡಿರುವ ಬಿಜೆಪಿ 1 ಲಕ್ಷ ಮತಗಳ ಅಂತರ ಸಾಧಿಸಿ ಗೆಲುವಿನತ್ತ ಬಿಜೆಪಿ ದಾಪುಗಾಲು ಇಡುತ್ತಿದೆ.

Previous articleಒಪನ್ ಆಗದ ಮತಯಂತ್ರ
Next articleಚಿಕ್ಕೋಡಿ ಎಂಟನೇಯ ಸುತ್ತು ಮುಕ್ತಾಯ: ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್