ಉಗ್ರರ ಹೇಯ ಕೃತ್ಯ ಬೆಂಬಲಿಸಿ‌ ಪೋಸ್ಟ್‌: ದೂರು

0
13

ಮಂಗಳೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಅಟ್ಟಹಾಸ‌ ಮೆರೆದ ಹೇಯ ಕೃತ್ಯವನ್ನು ಬೆಂಬಲಿಸಿ‌ ವ್ಯಕ್ತಿಯೋರ್ವ ಫೆಸ್‌ಬುಕ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಸಂಗತಿ ಬೆಳಕಿಗೆ‌ ಬಂದಿದೆ.
ನಿಚ್ಚು ಮಂಗಳೂರು ಎಂದು ಫೇಸ್‌ಬುಕ್‌ನಲ್ಲಿ ಅಕೌಂಟ್ ಹೊಂದಿರುವ ವ್ಯಕ್ತಿಯು ‘”2023 ರಲ್ಲಿ ಮಹಾರಾಷ್ಟ್ರದ ಪಾಲ್ಗರ್ ರೈಲ್ವೆ ಸ್ಟೇಷನ್ ನಲ್ಲಿ ಚೇತನ್ ಸಿಂಗ್ ಎಂಬ ಷಂಡ ಪರಿವಾರದ ಭಯೋತ್ಪಾದಕ ನೀವು ಮುಸ್ಲಿಮಾ ಅಂತ ಕೇಳಿ ಮೂರು ಮಂದಿ ಮುಸ್ಲಿಮರನ್ನು ಹತ್ಯೆ ಮಾಡಿರುವುದನ್ನೂ ಷಂಡ ಪೀತ ಪತ್ರಿಕೆಗಳು ನೆನಪಿಸಬೇಕು. ಆವತ್ತು ಆ ಭಯೋತ್ಪಾದಕ ಷಂಡನನ್ನು ಸಾರ್ವಜನಿಕವಾಗಿ ಕುತ್ತಿಗೆಗೆ ಹಗ್ಗ ಹಾಕಿದ್ದರೆ ಇಂದು ಶ್ರೀನಗರದಲ್ಲೂ ಇಂತಹ ಕೃತ್ಯ ನಡೆಯುತ್ತಿರಲಿಲ್ಲ” ಎಂದು ಬರೆದಿದ್ದಾನೆ. ಈತ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ವ್ಯಕ್ತಿಯೆಂದು ಹೇಳಲಾಗುತ್ತಿದ್ದು, ದೂರಿನನ್ವಯ ಈ ಬಗ್ಗೆ ಕೊಣಾಜೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Previous articleವಿನಯ ಕುಲಕರ್ಣಿ ಮನೆ ಮೇಲೆ ದಾಳಿ
Next articleಯುದ್ಧ ನಿಲ್ಲಿಸುವಂತೆ ಪುಟಿನ್‌ಗೆ ಟ್ರಂಪ್ ಕರೆ