ಬೆಂಗಳೂರು: ಸಿಎಂ ಸಿದ್ದರಾಮಯ್ಯರವರ ದಲಿತ ವಿರೋಧಿ ನೀತಿಗಳು ನಿಂತಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಈ ವರ್ಷದ ಬಜೆಟ್ ಕುರಿತಂತೆ ಸಾನಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ದಲಿತ ಸಮುದಾಯದ ನಾಯಕರನ್ನು ತುಳಿಯುತ್ತಲೇ ಮೇಲೆ ಬಂದಿರುವ ಸಿಎಂ ಸಿದ್ದರಾಮಯ್ಯರವರ ದಲಿತ ವಿರೋಧಿ ನೀತಿಗಳು ಅಲ್ಲಿಗೇ ನಿಂತಿಲ್ಲ ಎರಡನೇ ಬಾರಿ ಅಧಿಕಾರಕ್ಕೆ ಬಂದಾಗಿನಿಂದ ಎಸ್‌ಸಿಎಸ್ ಪಿ/ಟಿಎಸ್‌ಪಿ ಹಣವನ್ನ ದುರುಪಯೋಗ ಮಾಡುತ್ತಿರುವ ಕರ್ನಾಟಕ ಕಾಂಗ್ರೆಸ್ ಈ ವರ್ಷದ ಬಜೆಟ್ ನಲ್ಲೂ ದ್ರೋಹ ಮಾಡಲು ಹೊರಟಿದೆ.
2023-24 ರ ₹11,144 ಕೋಟಿ, 2024-25 ರಲ್ಲಿ ₹14,282 ಕೋಟಿ ರೂಪಾಯಿ ಪರಿಶಿಷ್ಟರ ಹಣವನ್ನ ದುರುಪಯೋಗ ಮಾಡಿದ್ದ ಕಾಂಗ್ರೆಸ್ ಸರ್ಕಾರ ಈ ಬಾರಿ ₹25,000 ಕೋಟಿ ರೂಪಾಯಿ SCSP/TSP ಹಣವನ್ನ ಗ್ಯಾರೆಂಟಿಗಳ ಹೆಸರಿನಲ್ಲಿ ಗುಳುಂ ಮಾಡುವ ಮೂಲಕ ಪರಿಶಿಷ್ಟ ಸಮುದಾಯಗಳಿಗೆ ಮತ್ತೂಮ್ಮೆ ದ್ರೋಹ ಬಗೆಯಲು ಹೊಂಚು ಹಾಕುತ್ತಿದೆ ಎಂದಿದ್ದಾರೆ