ಬಾಗಲಕೋಟೆ: ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದ ಕೆ.ಎಸ್. ಈಶ್ವರಪ್ಪನವರು ಮುಖ್ಯಮಂತ್ರಿಯಾಗಬೇಕಾಗಿತ್ತು. ಆದರೆ ಬಿಜೆಪಿ ಅದಕ್ಕೆ ಅವಕಾಶ ನೀಡಲಿಲ್ಲ. ಅವರನ್ನು ಬಿಜೆಪಿ ಪಕ್ಷದಿಂದ ಹೊರಹಾಕಿದ್ದರಿಂದ ಪಕ್ಷವೇ ಈಗ ಮೂಲೆ ಗುಂಪಾಗಿದೆ ಎಂದು ಮಕಣಾಪುರದ ಸೋಮೆಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಜರುಗಿದ ರಾಯಣ್ಣ ಬ್ರಿಗೇಡ್ ಸಂಘಟನೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷಕ್ಕಾಗಿ ದುಡಿದಂತಹ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪನವರನ್ನು ಹೊರಹಾಕಿದ ಬಿಜೆಪಿ ಈಗ ಅಧಿಕಾರ ವಂಚಿತವಾಗಿದೆ. ನಿಷ್ಠೆಯಿಂದ ದುಡಿವರಿಗೆ ಪಕ್ಷಗಳು ಪ್ರಥಮ ಆದ್ಯತೆ ನೀಡಿದಾಗ ಮಾತ್ರ ಪಕ್ಷ ಉಳಿದು ಬೆಳೆಯಲು ಸಾಧ್ಯ ಎಂದರು.
ಹುಬ್ಬಳ್ಳಿ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಬಿಜೆಪಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪನವರನ್ನು ಸಿಎಂ ಮಾಡಲಿಲ್ಲ ಎಂಬ ಬೇಜಾರು ಬೇಡ ಇಂದು ಉದ್ಘಾಟನೆಗೊಂಡಿರುವ ರಾಯಣ್ಣ ಬ್ರಿಗೇಡ್ ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವಂತಾದರೆ ಮುಂದೊಂದು ದಿನ ಈಶ್ವರಪ್ಪನವರು ಸಿಎಂ ಆಗುವುದು ನಿಶ್ಚಿತ ಎಂದರು.