ಈವರೆಗೂ ಒಬ್ಬನನ್ನು ಮಾತ್ರ ಅರೆಸ್ಟ್ ಮಾಡಿದ್ದೀರಲ್ಲ: ಸಿಐಡಿಗೆ ನಿರಂಜನ ಪ್ರಶ್ನೆ

0
10

ಹುಬ್ಬಳ್ಳಿ: ನನ್ನ ಮಗಳ ಹತ್ಯೆಗೆ ಸಂಬಂಧಪಟ್ಟಂತೆ ಈವರೆಗೆ ಕೇವಲ ಒಬ್ಬನನ್ನು ಮಾತ್ರ ಬಂಧಿಸಿದ್ದೀರಿ? ಯಾಕೆ? ಪ್ರಕರಣ ತನಿಖೆ ಯಾವ ಹಂತದಲ್ಲಿದೆ ಎಂದು ಸಿಐಡಿ ತನಿಖಾ ತಂಡದ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದೇನೆ. ತನಿಖೆ ಪ್ರಗತಿಯಲ್ಲಿದೆ. ದಯವಿಟ್ಟು ಸಹಕರಿಸಬೇಕು. ಕೂಲಂಕುಷವಾಗಿಯೇ ತನಿಖೆ ಮಾಡುತ್ತಿದ್ದೇವೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ನೇಹಾ ಹಿರೇಮಠ ತಂದೆ ಹಾಗೂ ಕಾರ್ಪೋರೇಟರ್ ನಿರಂಜನ ಹಿರೇಮಠ ಹೇಳಿದರು.
ಸರ್ಕ್ಯೂಟ್ ಹೌಸ್‌ನಲ್ಲಿ ಸಿಐಡಿ ತನಿಖಾ ತಂಡದ ಅಧಿಕಾರಿಗಳನ್ನು ರವಿವಾರ ರಾತ್ರಿ ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಸುತ್ತಿದ್ದೇವೆ. ನೀವು ಈಗಾಗಲೇ ಅನೇಕ ಮಾಹಿತಿ ಕೊಟ್ಟಿದ್ದೀರಿ. ಇನ್ನೂ ಮಾಹಿತಿ ಇದ್ದರೆ ಕೊಡಿ. ಯಾರ ಮೇಲಾದರೂ ಅನುಮಾನಗಳಿದ್ದರೆ ಲಿಖಿತವಾಗಿ, ಮೌಖಿಕವಾಗಿ ಹೇಳಿಕೆ ದಾಖಲಿಸಬಹುದು ಎಂದು ಹೇಳಿದ್ದಾರೆ ಎಂದು ನಿರಂಜನ ತಿಳಿಸಿದರು.
ನೇಹಾ ಹತ್ಯೆ ಪ್ರಕರಣ ಹಾಗೂ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣ ಎರಡನ್ನೂ ಸಿಐಡಿ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದೆ. ಡಿಜಿಯವರೂ ಸೋಮವಾರ ನಗರಕ್ಕೆ ಭೇಟಿ ನೀಡಲಿದ್ದುನಮ್ಮ ಮನೆಗೂ ಬರಲಿದ್ದಾರೆ ಎಂದು ತನಿಖಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿದರು.

Previous article`ವೋಟ್ ಜಿಹಾದ್’ಗೆ ಪಾಕಿಸ್ತಾನದಲ್ಲಿ ಪ್ರಾರ್ಥನೆ
Next articleತಟಸ್ಥ ಉಳಿದರೆ ನೋಟಾ….