ಬೈಲಹೊಂಗಲ: ಪಟ್ಟಣದ ಹೊಸೂರ ರಸ್ತೆಯ್ ವಿಜಯ ಸೋಶಿಯಲ್ ಕ್ಲಬ್ ಆವರಣದಲ್ಲಿರುವ ಈಜುಗೊಳಕ್ಕೆ ಈಜಲು ಹೋದ ಬಾಲಕನೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ.
ತಾಲೂಕಿನ ಗರ್ಜೂರ ಗ್ರಾಮದ ಬಾಲಕ ಅಬ್ದುಲಜೈಲಾನಿ ಇಮಾಮಹುಸೇನ ನದಾಫ (14) ಎಂದು ಗೊತ್ತಾಗಿದೆ. ಬಾಲಕ ಬೈಲವಾಡ ಗ್ರಾಮದ ಮದರಸಾದಲ್ಲಿ 9ನೇ ತರಗತಿಯಲ್ಲಿ ಶಿಕ್ಷಣ ಪಡೆಯುತ್ತಿದ್ದ. ಮನೆಯಿಂದ ಮದರಸಾ ಶಾಲೆಗೆ ಹೋಗುತ್ತೇನೆ ಎಂದು ಬಂದು ಗೆಳೆಯರೊಂದಿಗೆ ಈಜುಗೋಳಕ್ಕೆ ಈಜಲು ಹೋಗಿದ್ದ ಎನ್ನಲಾಗಿದೆ.
ಈಜುಗೊಳದಲ್ಲಿ ಸುರಕ್ಷತಾ ಕ್ರಮ ಇಲ್ಲದ್ದರಿಂದ ಪದೆ, ಪದೆ ಈಜಲು ಹೋದ ಬಾಲಕರ ಸಾವು ಸಂಭವಿಸುತ್ತಿದ್ದು ಈಗಾಗಲೇ ಮೂರ್ನಾಲ್ಕು ಸಾವುಗಳಾಗಿವೆ. ಈ ಕುರಿತು ಸೂಕ್ತ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
                























