ಜೋಯಿಡಾ: ತಾಲೂಕಿನ ಗಣೇಶಗುಡಿಯಲ್ಲಿನ ಬಾಡಗುಂದ ಹೋಂ ಸ್ಟೇಯೊಂದರ ಈಜುಕೊಳದಲ್ಲಿ ಬೆಳಗಾವಿ ಮೂಲದ ಬಾಲಕನೋರ್ವ ಮುಳುಗಿ ಸಾವನ್ನಪ್ಪಿರುವ ಘಟನೆ ಭಾನುವಾರ ಸಾಯಂಕಾಲ ತಿಳಿದುಬಂದಿದೆ.
ಹುಸೇನೈನ್ ರಹಿಮ್ ಖಾನ್ (6) ಎಂಬಾತನೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಬಾಲಕನಾಗಿದ್ದಾನೆ. ಬೆಳಗಾವಿ ಮೂಲದ ಕುಟುಂಬವು ಗಣೇಶಗುಡಿಯ ಬಾಡಗುಂದದ ಅಶೋಕ ಹೋಂ ಸ್ಟೇಗೆ ಬಂದಿದ್ದರು. ಈ ಕುಟುಂಬದ ಪುಟಾಣಿ ಬಾಲಕ ಈಜುಕೊಳದಲ್ಲಿ ಯಾವುದೇ ರಕ್ಷಣಾತ್ಮಕ ಮುನ್ನೆಚ್ಚರಿಕೆ ಇಲ್ಲದೆ ಈಜಲು ಹೋಗಿ ಮುಳುಗಿ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ.
ಮುಳುಗಿದ ಬಾಲಕನನ್ನು ತಕ್ಷಣವೇ ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ತರಲಾಯಿತು, ಆದರೆ ಅಷ್ಟರಲ್ಲೇ ಮೃತಪಟ್ಟಿದ್ದಾಗಿ ತಿಳಿದುಬಂದಿದೆ. ಆಸ್ಪತ್ರೆಯ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.