ಇಲಾಚಿ ಹಣ್ಣು ಸಿಕ್ಕರೆ ತಪ್ಪದೆ ತಿನ್ನಿ ಎಂದ ಶರಣ್‌

0
66

ಇಲಾಚಿ ಹಣ್ಣು ಸಿಕ್ಕರೆ ತಪ್ಪದೆ ತಿನ್ನಿ ಎಂದು ನಟ ಶರಣ್ ಹೇಳಿದ್ದಾರೆ.
ಇಲಾಚಿ ಹಣ್ಣು ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ನಮ್ಮ ಹುಬ್ಬಳ್ಳಿ ಮಂದಿಗೆ ಇಲಾಚಿ ಹಣ್ಣೆಂದರೆ ಆಹಾ..! ಬಾಲ್ಯದಲ್ಲಿ ಬೊಗಸೆ ಬೊಗಸೆಯಷ್ಟು ಸಿಗುತ್ತಿದ್ದ ಈ ಹಣ್ಣು ಈಗ ಯಾವ ಕಾರಣಕ್ಕೋ ಅಪರೂಪವಾಗಿದೆ ಎಂದೆನಿಸುತ್ತದೆ. ನಿಮ್ಮ ಊರಲ್ಲಿ ಯಾವ ಹೆಸರು ಈ ಹಣ್ಣಿಗೆ ಮತ್ತು ಅಲ್ಲಾದರೂ ಸಾಕಷ್ಟು ಸಿಗುವುದೇ? ಸಿಕ್ಕರೆ ತಪ್ಪದೆ ತಿನ್ನಿ… A childhood crush in the form of a fruit—sweet & rare ಎಂದಿದ್ದಾರೆ.

ಇನ್ನು ತಜ್ಞರ ಪ್ರಕಾರ, ಇಲಾಚಿ ಹಣ್ಣು ಸಹ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತೆಗೆದುಹಾಕಲು ಇಲಾಚಿ ಹಣ್ಣಿನ ತೊಗಟೆ ಯಾವುದೇ ಔಷಧಿಗಿಂತ ಕಡಿಮೆಯಿಲ್ಲ. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿರುವವರು ಇದನ್ನು ಕಚ್ಚಾ ಅರಿಶಿನ ಮತ್ತು ಕಿತ್ತಳೆ ಸಿಪ್ಪೆಯೊಂದಿಗೆ ಅದರ ತೊಗಟೆಯೊಂದಿಗೆ ಪುಡಿ ಮಾಡಿ ಚರ್ಮದ ಮೇಲೆ ಹಚ್ಚಿದರೆ ಚರ್ಮದ ಕಾಂತಿ ಹೆಚ್ಚಿಸುತ್ತದೆ ಎನ್ನುತ್ತಾರೆ.

ಇಲಾಚಿಗೆ ನಿಮ್ಮೂರಲ್ಲಿ ಏನಂತಾರೆ… : ಇನ್ನು ನಟ ಶರಣ್ ಇಲಾಚಿ ಹಣ್ಣಿಗೆ ನಿಮ್ಮೂರಲ್ಲಿ ಏನಂತಾರೆ ಎಂಬ ಪ್ರಶ್ನೆಗೆ ನೆಟ್ಟಿಗರು ಹಲವು ಬಗೆಯ ಹೆಸರುಗಳನ್ನು ಸೂಚಿಸುವದರ ಜೊತೆಗೆ ತಮ್ಮ ಬಾಲ್ಯದ ಸವಿಯನ್ನು ಮೆಲಕು ಹಾಕಿದ್ದಾರೆ, ಸಿಹಿ ಹುಣಸೆ ಹಣ್ಣು, ದ್ವಾರೆ ಹುಣಸೆ ಕಾಯಿ, ಇಂಗರಾಜ ಕಾಯಿ, ಮಲ್ನಾಡ್ ಹುಂಚಿಕಾಯಿ, ಪಿಳ್ಳೆ ಮೆಣಸಿನಕಾಯಿ, ಗೋಲ್ಕಂಬರ ಕಾಯಿ, ಇಲಾಚ ಕಾಯಿ, ಕಾಡು ಹುಣಸೆಹಣ್ಣು ಹೀಗೆ ಹಲವಾರು ಹೆಸರುಗಳನ್ನು ಹೇಳಿದ್ದಾರೆ.

Previous articleವಿದೇಶಿ ಬೇಹುಗಾರಿಕೆ: ಎನ್​ಐಎ ಪೊಲೀಸರಿಂದ ಇಬ್ಬರ ಬಂಧನ
Next articleಚುನಾವಣೆ ನಡೆಯದಂತೆ ನೋಡಿಕೊಂಡಿದ್ದು ನಿಮ್ಮ ಸರ್ಕಾರ