ಇಬ್ಬರು ಸಚಿವರ ಹೆಸರು ಸದನದಲ್ಲಿ ಹೇಳುವೆ

ವಿಜಯಪುರ: ನಟಿ ರನ್ಯಾ ರಾವ್ ವಿದೇಶಗಳಿಂದ ಚಿನ್ನ ಅಕ್ರಮ ಸಾಗಾಟ ಪ್ರಕರಣದಲ್ಲಿ ಯಾರು ಸಂಪರ್ಕದಲ್ಲಿದ್ದರು? ಯಾರು ಸೆಕ್ಯುರಿಟಿ ಕೊಟ್ಟರು ಎಂಬಿತ್ಯಾದಿ ಕುರಿತು ನಾಳೆ ಸದನದಲ್ಲಿ ಮಾತನಾಡುವೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಾಂಬ್ ಸಿಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರನ್ಯಾ ರಾವ್ ಆಕೆಯೊಂದಿಗೆ ಸಂಪರ್ಕವಿರೋ ಇಬ್ಬರ ಸಚಿವರ ಹೆಸರು ಸದನದಲ್ಲಿ ಹೇಳುವೆ, ಇಲ್ಲಿ ಹೇಳಲ್ಲ, ಇದು ಸದನದ ಆಸ್ತಿ ಸದನದಲ್ಲಿರಲಿ ಎಂದರು.
ರನ್ಯಾ ಜೊತೆಗೆ ಸಂಬಂಧ ಹೊಂದಿದವರು ಯಾರು ಆಕೆಗೆ ಪ್ರೋಟೊಕಾಲ್ ಕೊಟ್ಟವರ ಮಾಹಿತಿ ಸಂಗ್ರಹ ಮಾಡಿದ್ದೇವೆ. ಗೋಲ್ಡ್ ಎಲ್ಲಿಂದ ತಂದರು. ಹೇಗೆ ಬಚ್ಚಿಟ್ಟು ತಂದರು ಗೊತ್ತಿದೆ. ರನ್ಯಾ ಪ್ರಕರಣದಲ್ಲಿ ಕೇಂದ್ರದ ಕಸ್ಟಮ್ ಆಧಿಕಾರಿಗಳೂ ತಪ್ಪು ಮಾಡಿದ್ದಾರೆಂದು ಸಚಿವ ಲಾಡ್ ಆರೋಪ ವಿಚಾರದ ಕುರಿತ ಪ್ರಶ್ನೆಗೆ ಉತ್ತರಿಸಿದ ಯತ್ನಾಳ, ಯಾರು ತಪ್ಪು ಮಾಡಿದ್ದರೆ ಅದು ತಪ್ಪು. ಕಸ್ಟಮ್ ಆಧಿಕಾರಿಗಳು ತಪ್ಪು ಮಾಡಿದ್ದರೆ ನಾವು ಬಿಜೆಪಿಯವರು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಕೇಂದ್ರದ ಅಧಿಕಾರಿಗಳ ತಪ್ಪಿದ್ದರೆ ಅದು ತಪ್ಪೇ ಎಂದರು.