ಕಲಬುರಗಿ : ಅಫಜಲಪುರ ತಾಲೂಕಿನ ಬನ್ನೆಟ್ಟಿ ಗ್ರಾಮದ ಭೀಮಾ ನದಿಯಲ್ಲಿ ಬಟ್ಟೆ ತೊಳೆಯಲು ತೆರಳಿದ್ದ ಬಾಲಕಿಯರು ನದಿಯಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ಬಟ್ಟೆ ಒಗೆದೆ ಮೇಲೆ ನದಿಯಲ್ಲಿ ಈಜಾಡಲು ಮುಂದಾಗಿದ್ದ, ಬಾಲಕಿಯರು, ನದಿಯಲ್ಲಿ ಈಜಾಡುವಾಗ ಭೂಮಿಕಾ ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದಾಗ ಕಾಪಾಡಲು ಮುಂದಾದ ಶ್ರಾವಣಿಯು ಸಹ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ, ಕೊಚ್ಚಿ ಹೋಗಿರುವ ಬಾಲಕಿಯರನ್ನು ಅಫಜಲಪುರ ತಾಲ್ಲೂಕಿನ ಬನಹಟ್ಟಿ ಗ್ರಾಮದ ಶ್ರಾವಣಿ (11) ಮತ್ತು ಭೂಮಿಕಾ (8) ಎಂದು ಗುರಿತಸಲಾಗಿದೆ, ಬಾಲಕಿಯರಿಗಾಗಿ ಅಗ್ನಿಶಾಮಕ ಸಿಬ್ಬಂಧಿ ಮತ್ತು ಪೊಲೀಸರಿಂದ ಹುಡುಕಾಟ ನಡೆಸಲಾಗುತ್ತಿದೆ.