ಇಬ್ಬರು ಉಗ್ರರ ಹತ್ಯೆ ಯೋಧ ಹುತಾತ್ಮ

0
12

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಕಳೆದ ಮೂರು ದಿನಗಳಲ್ಲಿ ಮೂರು ಭಯೋತ್ಪಾದಕ ದಾಳಿ ನಡೆದಿದೆ. ಕಥುವಾ ಗ್ರಾಮದಲ್ಲಿ ಮಂಗಳವಾರ ರಾತ್ರಿ ತಡರಾತ್ರಿ ಭಯೋತ್ಪಾದಕರು ಹಾಗೂ ಸೇನಾ ಯೋಧರ ನಡುವಣ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತ್ಯೆಗೀಡಾಗಿದ್ದಲ್ಲದೆ, ಅರೆಸೇನಾ ಪಡೆಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ರಾತ್ರಿಯೇ ಆರಂಭವಾದ ಎರಡು ಎನ್‌ಕೌಂಟರ್ ಬುಧವಾರ ಬೆಳಗ್ಗೆಯವರೆಗೆ ನಡೆಯಿತು. ಈ ಪೈಕಿ ದೋಡಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ವೈವರು ಯೋಧರು ಮತ್ತು ಒಬ್ಬ ವಿಶೇಷ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ. ದೋಡಾ ಪ್ರದೇಶದ ಛತ್ತರ್‌ಗಾಲ ಪ್ರದೇಶದಲ್ಲಿನ ರಾಷ್ಟ್ರೀಯ ರೈಫಲ್ಸ್ ಸಿಬ್ಬಂದಿ ಮತ್ತು ಪೊಲೀಸರು ಗುಡ್ಡವೊಂದರ ಮೇಲೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು. ಕಥುವಾ ಘಟನೆಯಲ್ಲಿ ಇಬ್ಬರು ಭಯೋತ್ಪಾದಕರು ಭಾಗಿಯಾಗಿದ್ದು, ಒಬ್ಬ ರಾತ್ರಿಯೇ ಭದ್ರತಾ ಸಿಬ್ಬಂದಿ ಗುಂಡಿಗೆ ಸಾವಿಗೀಡಾಗಿದ್ದಾನೆ. ಮತ್ತೊಬ್ಬ ಅಮೆರಿಕ ನಿರ್ಮಿತ ಎಂ೪ ಕಾರ್ಬೈನ್ ಅಸಾಲ್ಟ್ ರೈಫಲ್ ಹೊಂದಿದ್ದು, ಬುಧವಾರ ಬೆಳಗ್ಗೆ ಅವನನ್ನು ಗುಂಡಿಟ್ಟು ಕೊಲ್ಲಲಾಗಿದೆ.

Previous articleಅನ್ಯಕೋಮಿನ ಇಬ್ಬರು ಜತೆ ಯುವತಿ: ಮೂವರು ಪೊಲೀಸ್‌ ವಶ
Next articleಮಾಜಿ ಸಿಎಂ ಬಿಎಸ್‌ವೈಗೆ ನೋಟಿಸ್: ಮತ್ತೆ ಸಂಕಷ್ಟ