ಇಂದು ಹುಬ್ಬಳ್ಳಿಯಲ್ಲಿ ಮಾರ್ಟಿನ್‌…

0
16

ಹುಬ್ಬಳ್ಳಿ: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇಂದು ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ʼಮಾರ್ಟಿನ್‌ʼ ಚಿತ್ರದ ಭರ್ಜರಿ ಪ್ರಚಾರ ಮಾಡಲಿದ್ದಾರೆ.
ನಿನ್ನೆ ಹೈದರಾಬಾದ್‌ನಲ್ಲಿ ಚಿತ್ರದ ಪ್ರಚಾರ ಮಾಡಿರುವ ‘ಮಾರ್ಟಿನ್’ ಚಿತ್ರತಂಡ ಇಂದು ಹುಬ್ಬಳ್ಳಿಗೆ ಆಗಮಿಸಲಿದೆ. ಅಲ್ಲಿ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಲಿದೆ. ಧ್ರುವ ಸರ್ಜಾ ಫ್ಯಾನ್ಸ್ ಭೇಟಿ ಮಾಡಿದ ಬಳಿಕ, ಮಾಧ್ಯಮಗಳೊಂದಿಗೆ ಸಿನಿಮಾ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಹುಬ್ಬಳ್ಳಿಯ ನಂತರ ‘ಮಾರ್ಟಿನ್’ ತಂಡ ಅಕ್ಟೋಬರ್ 6ರಂದು ದಾವಣಗೆರೆಯಲ್ಲಿ ಚಿತ್ರದ ಪ್ರೀ ರಿಲೀಸ್ ಇವೆಂಟ್ ಅನ್ನು ಹಮ್ಮಿಕೊಳ್ಳಲಾಗಿದ್ದು. ಅಕ್ಟೋಬರ್ 6ರಂದು ನಟ ಧ್ರುವ ಸರ್ಜಾ ಅವರ ಜನುಮದಿನ ಇದ್ದು, ಅದರ ಪ್ರಯುಕ್ತ ದಾವಣಗೆರೆಯಲ್ಲಿ ಅದ್ಧೂರಿಯಾಗಿ ಪ್ರೀ ರಿಲೀಸ್ ಇವೆಂಟ್ ನಡೆಯಲಿದೆ. ಧ್ರುವ ಸರ್ಜಾ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಅಷ್ಟೇ ಅಲ್ಲದೆ ಕನ್ನಡದ ಅತೀ ದೊಡ್ಡ ಬಜೆಟ್ ಸಿನಿಮಾ ಕೂಡ ಆಗಿರುವ ಮಾರ್ಟಿನ್‌ ಚಿತ್ರ ಅಕ್ಟೋಬರ್ 11 ರಂದು ರಿಲೀಸ್ ಆಗುತ್ತಿದೆ.

Previous articleಮಳೆಗೆ ಕುಸಿದ ಮನೆ: ಮಣ್ಣಿನಲ್ಲಿ ಸಿಲುಕಿದ ವ್ಯಕ್ತಿ ರಕ್ಷಣೆ
Next articleಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಕೊಡಲಿ ಪೆಟ್ಟು