ಇಂದು ಅರಿವೇ ಗುರು ಪ್ರಶಸ್ತಿ ಪ್ರದಾನ

0
8

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ಕೊಡಮಾಡುವ “ಅರಿವೇ ಗುರು’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ. ೨೯ರಂದು ಬೆಳಗ್ಗೆ ೧೧ ಗಂಟೆಗೆ ಕವಿವಿ ಸುವರ್ಣ ಮಹೋತ್ಸವ
ಭವನದಲ್ಲಿ ಆಯೋಜಿಸಲಾಗಿದೆ.
೨೦೨೪ನೇ ಸಾಲಿನಲ್ಲಿ ಕಲಾ ಕ್ಷೇತ್ರದಿಂದ ಡಾ. ಚಂದ್ರಶೇಖರ ಕಂಬಾರ, ಸಮಾಜ ವಿಜ್ಞಾನ ಕ್ಷೇತ್ರದಿಂದ ಡಾ. ವಿ.ಜಿ. ತಳವಾರ ಹಾಗೂ ವಿಜ್ಞಾನ ಕ್ಷೇತ್ರದಿಂದ ಕವಿವಿಯ ಎಮರಿಟೀಸ್ ಪ್ರಾಧ್ಯಾಪಕ ಮತ್ತು ಗಣಿತ ವಿಜ್ಞಾನಿ ಪ್ರೊ.ಎನ್.ಎಂ. ಬುಜುರ್ಕೆ ಅವರನ್ನು ಆಯ್ಕೆ ಮಾಡಲಾಗಿದೆ.
ಕನ್ನಡ ಹಂಪಿ ವಿಶ್ವವಿದ್ಯಾಯದ ಕುಲಪತಿ ಡಾ. ಡಿ.ಬಿ. ಪರಮಶಿವಮೂರ್ತಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕವಿವಿ ಪ್ರಭಾರ ಕುಲಪತಿ ಪ್ರೊ. ಜಯಶ್ರೀ ಎಸ್ ವಹಿಸಲಿದ್ದು, ಕವಿವಿ ಕುಲಸಚಿವರಾದ ಡಾ. ಎ. ಚೆನ್ನಪ್ಪ, ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಕೃಷ್ಣ ನಾಯಕ ಭಾಗವಹಿಸಲಿದ್ದಾರೆ. ೨೦೨೨ರಿಂದ ಅರಿವೇ ಗುರು ಪ್ರಶಸ್ತಿ ನೀಡಲಾಗುತ್ತಿದೆ.

Previous articleಅನಿಲ ಸೋರಿಕೆಯಿಂದ ಕಾರ್ಮಿಕ ಸಾವು
Next articleವಿದ್ಯುತ್ ಶಾರ್ಟ್ ಸರ್ಕ್ಯೂಟ್: 8 ಬಣವಿ ಭಸ್ಮ