ಆಸ್ತಿ ವಿಚಾರಕ್ಕೆ ಗಲಾಟೆ: ಪೆಟ್ರೋಲ್ ಸ್ಪ್ರೆ ಮಾಡಿ ಸಾಮೂಹಿಕ ಹತ್ಯೆಗೆ ಯತ್ನ

0
13

ಕಲಬುರಗಿ: ಆಸ್ತಿ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ದುಷ್ಕರ್ಮಿಯೊಬ್ಬ ಮನೆಯೊಂದಕ್ಕೆ ಪೆಟ್ರೋಲ್ ಸ್ಪ್ರೆ ಮಾಡಿ ಬೆಂಕಿ ಹಚ್ಚಿ ಸಾಮೂಹಿಕ ಹತ್ಯೆಗೆ ಯತ್ನಿಸಿರುವ ಘಟನೆ ಕಲಬುರಗಿ ತಾಲ್ಲೂಕಿನ ಕಡಣಿ ಗ್ರಾಮದಲ್ಲಿ ನಡೆದಿದೆ.
ಆ ಗ್ರಾಮದ ಗುಂಡೇರಾವ್ ಎಂಬಾತರ ಮನೆಗೆ ಶಿವಲಿಂಗಪ್ಪ ಎಂಬುವವರು ಗುಂಡೆರಾವ್ ಮನೆಗೆ ಪೆಟ್ರೋಲ್ ಸುರಿದಿರುವ ವ್ಯಕ್ತಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಶಿವಲಿಂಗಪ್ಪ ಎಂಬುವವರು 5 ವರ್ಷದ ಹಿಂದಷ್ಟೇ ಗುಂಡೇರಾವ್ ಅವರಿಗೆ 4 ಎಕರೆ ಜಮೀನು ಮಾರಾಟ ಮಾಡಿದ್ದರು. ಅದಕ್ಕೆ 13 ಲಕ್ಷ ಅಡ್ವಾನ್ಸ್ ಕೊಟ್ಟಿದ್ದರು. ಇದೀಗ ರಿಜಿಸ್ಟರ್ ಮಾಡುವ ವೇಳೆಯಲ್ಲಿ ಗಲಾಟೆಯಾಗಿದೆ.

ಇದೇ ಸಿಟ್ಟಿನಲ್ಲಿ ಶಿವಲಿಂಗಪ್ಪ ಎಂಬಾತ ಗುಂಡೇರಾವ್ ಮನೆಗೆ ಪೆಟ್ರೋಲ್ ಸ್ಪ್ರೆ ಮಾಡಿ, ಮನೆ ಸುಟ್ಟು ಹಾಕಿದ್ದಾರೆ. ಅದೃಷ್ಟವಶಾತ್ ಗುಂಡೇರಾವ್ ಅವರ ಮನೆಯಲ್ಲಿದ್ದ ಕುಟುಂಬಸ್ಥರು ಬಚಾವ್ ಆಗಿದ್ದಾರೆ ಎಂದು ವರದಿಯಾಗಿದೆ.

ಆಹುತಿಯಾಗಿರುವ ಮನೆ ಸುಟ್ಟು ಕರಕಲಾಗಿದೆ,ಬೆಂಕಿ ಆವರಿಸಿದ್ದರಿಂದ ಮನೆಯಲ್ಲಿದ್ದ 7 ಜನರು ಅಸ್ವಸ್ಥರಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆ ಫರಹತಾಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

Previous articleಲಂಚ ಕೇಳಿದ ಅಧಿಕಾರಿಗಳ ವಿರುದ್ಧ ಕ್ರಮ
Next articleಹೆಸ್ಕಾಂ ಅಧ್ಯಕ್ಷರ ಅಧಿಕಾರ ಸ್ವೀಕಾರ ನಾಳೆ