ಕಲಬುರಗಿ: ಆಳಂದ ತಾಲ್ಲೂಕಿನಲ್ಲಿ ಮತ್ತೊಂದು ಫೈರಿಂಗ್ ನಡೆದಿದ್ದು, ಆಳಂದ ಜನತೆಯಲ್ಲಿ ಆತಂಕಮನೆ ಮಾಡಿದೆ.
ಕಡಗಂಚಿ ಗ್ರಾಮದಲ್ಲಿ ಸ್ನೇಹಿತರ ಜತೆಗೂಡಿ ಪಾರ್ಟಿ ಮಾಡುತ್ತಿದ್ದ ಸಂದರ್ಭದಲ್ಲಿ ಸ್ನೇಹಿತರೇ ಸ್ನೇಹಿತನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗ್ರಾಮದ ಶಾಂತಪ್ಪ ಪೂಜಾರಿ (28) ಎಡಗೈಗೆ ಒಂದು ಗುಂಡು ತಾಗಿದೆ, ತಡರಾತ್ರಿ ಕಡಗಂಚಿ ಗ್ರಾಮದ ಮನೆಯೊಂದರಲ್ಲಿ ಪಾರ್ಟಿ ಮಾಡುತ್ತಿರುವ ವೇಳೆ ಗುಂಡಿನ ದಾಳಿ ನಡೆದಿದ್ದು, ಶ್ರೀಕಾಂತ್, ಮಾಳಪ್ಪ, ಸೇರಿದಂತೆ ಆರೇಳು ಜನ ಸೇರಿಕೊಂಡು ಪಾರ್ಟಿ ಮಾಡುತ್ತಿರುವಾಗ ರ್ದುಘಟನೆ ನಡೆದಿದೆ. ಪಾರ್ಟಿ ವೇಳೆ ಜಗಳ ಉಂಟಾಗಿ ವಿಕೋಪಕ್ಕೆ ಹೋಗಿ ಗುಂಡಿನ ದಾಳಿ ಮಾಡಿದ ಗನ್ ಸಹಿತ ಆರೋಪಿಗಳಾದ
ಕಾಂತಪ್ಪ ಮತ್ತು ಮಾಳಪ್ಪ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ನರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.