ನವದೆಹಲಿ: ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ಅಲ್ಪಸಂಖ್ಯಾತ ಸ್ಥಾನಮಾನದ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವು ಅಲ್ಪ ಸಂಖ್ಯಾತ ಸ್ಧಾನಮಾನ ಪಡೆಯುವ ತನ್ನ 1967 ರ ತೀರ್ಪನ್ನು ಇಂದು ಸುಪ್ರೀಂಕೋರ್ಟ್ ಸಪ್ತ ನ್ಯಾಯಮೂರ್ತಿಗಳ ಪೀಠ ತಳ್ಳಿಹಾಕಿದೆ. ಹಿಂದಿನ ತೀರ್ಪನ್ನು 4:3ರ ಬಹುಮತದ ಮೂಲಕ ನ್ಯಾಯಾಲಯ ರದ್ದುಪಡಿಸಿದೆ.
ನಾಲ್ವರು ನ್ಯಾಯಮೂರ್ತಿಗಳು ಹಿಂದಿನ ಆದೇಶದ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದು, ಮೂವರು ನ್ಯಾಯಮೂರ್ತಿಗಳು ತೀರ್ಪಿನ ಪರವಾಗಿ ಒಲವು ವ್ಯಕ್ತಪಡಿಸಿದ್ದಾರೆ. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವು ಇದೀಗ ಅಲ್ಪಸಂಖ್ಯಾತ ಸ್ಧಾನಮಾನ ಕುರಿತ ವಿಚಾರವಾಗಿ ಮೂವರು ನ್ಯಾಯಮೂರ್ತಿಗಳ ನ್ಯಾಯಪೀಠವೇ ಸೂಕ್ತ ತೀರ್ಮಾನ ಕೈಗೊಳ್ಳಬಹುದು ಎಂದು ಹೇಳಿದೆ.