ಆರೋಪಿಗೆ ಪೊಲೀಸರಿಂದ ಗುಂಡೇಟು

0
33

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ಹಳೇಹುಬ್ಬಳ್ಳಿ ಚಾಕು ಇರಿತ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲು ಹೋದ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ. ಆಗ ಪೊಲೀಸರು ಆರೋಪಿ ಮುಜಮಿಲ್ ಯಾಕುಸಾಬ್ ಮಗಮಿ ಕಾಲಿಗೆ ಗುಂಡು ಹೊಡೆದು ಸೆರೆ ಹಿಡಿದರು.
ಈತ ಹಳೇಹುಬ್ಬಳ್ಳಿ ಘೋಡ್ಕೆ ಪ್ಲಾಟ್‌ನಲ್ಲಿ ಸಮೀರ್ ಶೇಖ್(೧೮) ಹಾಗೂ ಈತನ ಚಿಕ್ಕಪ್ಪ ಜಾವೇದ್ ಶೇಖ್(೩೬) ಎಂಬುವರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದನು. ಆತನನ್ನು ಹಿಡಿಯಲು ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಇನ್ಸಪೆಕ್ಟರ್ ಸುರೇಶ ಯಳ್ಳೂರ ಅವರು ಆರೋಪಿ ಬಲಗಾಲಿಗೆ ಫೈರ್ ಮಾಡಿದರು. ಸುರೇಶ ಯಳ್ಳೂರ, ಸಿಎಚ್‌ಸಿ ಸುಬ್ಬರಾಯ್ ಜಿ. ಅವರಿಗೆ ಸಹ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

Previous articleನೇಣು ಬಿಗಿದುಕೊಂಡು ಜೆಇ ಆತ್ಮಹತ್ಯೆ
Next articleಭೀಮಾ ನದಿಗೆ ಬಿದ್ದ ಕಬ್ಬು ತುಂಬಿದ ಲಾರಿ