ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಅವಕಾಶ

0
26

ಬೆಳಗಾವಿ: ವಿದ್ಯಾಭ್ಯಾಸವೆಂಬ ದೀಪಕ್ಕೆ ನವಚೇತನ ನೀಡುವ ವಿಶೇಷ ಕಾರ್ಯಕ್ರಮವಾದ ಕಾಹೇರ ಎಜುಕೇಶನ್ ಎಕ್ಸ್‌ಪೋ-೨೦೨೫ಕ್ಕೆ ಬೆಳಗಾವಿಯ ಜೆಎನ್‌ಎಂಸಿ ಕ್ಯಾಂಪಸ್‌ನ ಕೆಎಲ್‌ಇ ಸೆಂಟೆನರಿ ಕನ್ವೆನ್ಶನ್ ಸೆಂಟರ್‌ನಲ್ಲಿ ಚಾಲನೆ ನೀಡಲಾಯಿತು.
ಅಲೈಡ್ ಹೆಲ್ತ್ ಸೈನ್ಸಸ್ ಶಾಲೆಯ ವತಿಯಿಂದ ಎರಡು ದಿನಗಳ ಕಾಲ ನಡೆಯುತ್ತಿರುವ ಈ ವಿದ್ಯಾ ಮೇಳ ಕೆಎಲ್‌ಇ ಡೀಮ್ಡ್ ವಿಶ್ವವಿದ್ಯಾಲಯದ ಅಂಗಳದಲ್ಲಿ, ಶ್ರದ್ಧೆ, ಜ್ಞಾನ ಮತ್ತು ಭವಿಷ್ಯದ ಕನಸುಗಳನ್ನು ಒಂದೇ ವೇದಿಕೆಯಲ್ಲಿ ಶಿಕ್ಷಣ, ಸೇವೆ ಮತ್ತು ಸಮರ್ಪಣೆಗೆ ಸೇತುಬಂಧ ಎಂಬಂತಾಯಿತು.
ಸಾಂಸ್ಕೃತಿಕ ಮೆರವಣಿಗೆ, ಸಾಂದರ್ಭಿಕ ಸಂಗೀತ ಮತ್ತು ವಿದ್ಯಾರ್ಥಿಗಳ ಉತ್ಸಾಹದಿಂದ ಸಜ್ಜೆಯಾದ ಈ ವಿದ್ಯಾ ಕಾರ್ಯಕ್ರಮ, ವಿಜ್ಞಾನ ಹಾಗೂ ಮಾನವ ಸೇವೆಯ ಮೌಲ್ಯಗಳಿಗೆ ನಮನ ಅರ್ಪಿಸಿದಂತಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರು ಶಿಕ್ಷಣವೆಂಬ ಶಕ್ತಿ ನಿಮ್ಮ ಬದುಕಿಗೆ ಶಕ್ತಿ ನೀಡಲಿ ಎಂದು ಹಾರೈಸಿದರು. ಪಿಯುಸಿ ಅಥವಾ ಹತ್ತನೇ ತರಗತಿ ಬಳಿಕ ವೈದ್ಯಕೀಯವನ್ನೇ ಏಕೈಕ ಮಾರ್ಗ ಎಂದು ವಿದ್ಯಾರ್ಥಿಗಳು ಭಾವಿಸಬೇಕಿಲ್ಲ. ನೀಟ್ ಪರೀಕ್ಷೆಗೆ ಒಳಪಟ್ಟು ಅಥವಾ ಒಳಪಡದೆಯೂ ಸಹ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿರುವ ಹಲವು ಕೋರ್ಸ್‌ಗಳು ಈಗ ಲಭ್ಯವಿದೆ. ಇವುಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದಿರಬೇಕು ಎಂದರು.
ಸೇವೆಯ ಮುಖವಾಡ ಧರಿಸಿದ ಶಿಕ್ಷಣ ಮನುಷ್ಯತ್ವ ಬೆಳೆಸುತ್ತದೆ ಎಂದ ಅವರು, ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಶಿಸ್ತು ಮತ್ತು ಪರಿಶ್ರಮದ ಬಗ್ಗೆ ಮಾರ್ಗದರ್ಶನ ನೀಡಿದರು.
ಕಾಹೇರನ ಉಪಕುಲಪತಿ ಡಾ.ನಿತಿನ್ ಎಂ.ಗಂಗಾಣೆ, ಕುಲಸಚಿವ ಡಾ.ಎಂ.ಎಸ್. ಗಣಚಾರಿ, ಅಲೈಡ್ ಹೆಲ್ತ್ ಸೈನ್ಸಸ್ ಶಾಲೆಯ ಪ್ರಾಂಶುಪಾಲೆ ಡಾ.ಉರ್ಮಿಳಾ ಕಾಗಲ್ ಮತ್ತು ಇತರ ವಿದ್ಯಾರ್ಥಿ ಮಾರ್ಗದರ್ಶಕರು ಉಪಸ್ಥಿತರಿದ್ದರು. ವಿವಿಧ ಘಟಕಗಳ ಮುಖ್ಯಸ್ಥರು, ಶಿಕ್ಷಕರ ತಂಡ, ಸಾವಿರಾರು ವಿದ್ಯಾರ್ಥಿಗಳು ಹಾಗೂ ಪೋಷಕರು ಎಕ್ಸ್‌ಪೋದಲ್ಲಿ ಭಾಗವಹಿಸಿದ್ದರು.

Previous articleವಕ್ಪ್ ತಿದ್ದುಪಡಿ ಮಸೂದೆ ಅನುಮೋದನೆ: ಅನ್ವರ್ ಮಾಣಿಪ್ಪಾಡಿಗೆ ಜೀವ ಬೆದರಿಕೆ ಕರೆ
Next articleರಾಜ್ಯಪಾಲರ ಹೆಸರಿನ ಆಸ್ತಿ ಕಬಳಿಕೆ