ಆದರ್ಶ ಪುರುಷನಿಗೆ ಅವಮಾನ : ಉಪಲೋಕಾಯುಕ್ತ ಬಿ. ವೀರಪ್ಪ ಅಧಿಕಾರಿಗಳಿಗೆ ತರಾಟೆ

0
15

ದಾವಣಗೆರೆ: ಹಸಿರು ಕ್ರಾಂತಿ ಹರಿಕಾರ, ರಾಷ್ಟ್ರನಾಯಕ, ಭಾರತದ ಮಾಜಿ ಉಪಪ್ರಧಾನಮಂತ್ರಿಗಳಾದ ಡಾ.ಬಾಬು ಜಗಜೀವನರಾಂ ಅವರ ಆದರ್ಶ, ಚಿಂತನೆಗಳು ಎಲ್ಲಾ ಕಾಲಕ್ಕೂ ಮಾದರಿಯಾಗಿದ್ದು, ಅವರ ವ್ಯಕ್ತಿತ್ವ ಹಾಗೂ ಜೀವನ ಚರಿತ್ರೆಯನ್ನು ಯುವಪೀಳಿಗೆಗೆ ಪರಿಚಯಿಸಬೇಕಾದ ಈ ಭವನ ಹಾಳು ಕೊಂಪೆಯಾಗಿದೆ ಎಂದು ಉಪಲೋಕಾಯುಕ್ತ ಬಿ.ವೀರಪ್ಪ ತರಾಟೆಗೆ ತೆಗೆದುಕೊಂಡರು.
ಬೆಳ್ಳಂಬೆಳಗ್ಗೆ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಉಪಲೋಕಾಯುಕ್ತರು, ಹಳೆಯ ಭಾಗದ ಎಸ್.ಎಂ.ಕೃಷ್ಟ ನಗರದಲ್ಲಿರುವ ಡಾ.ಬಾಬು ಜಗಜೀವನವರಾಂ ಭವನಕ್ಕೆ ಭೇಟಿ ನೀಡಿದರು. ಭವನ ಪ್ರವೇಶಿಸುತ್ತಿದ್ದಂತೆ ಭೂತ ಬಂಗಲೆಯಂತೆ ಗೋಚರಿಸುವ ಭವನ ಕಂಡು ಕೆಂಡಾಮಂಡಲರಾದರು. ಯಾವ ಪುರುಷಾರ್ಥಕ್ಕಾಗಿ ಈ ಭವನ ನಿರ್ಮಿಸಿದ್ದೀರಿ, ಈ ಭವನ ನಿರ್ಮಿಸಿದ ಉದ್ದೇಶವೇನು, ಭವಿಷ್ಯದ ಯುವಪೀಳಿಗೆ ಏನು ಸಂದೇಶ ಕೊಡ್ತೀರಿ, ಎಲ್ಲಿ ನೋಡಿದರೂ ಕಸದ ರಾಶಿ, ಮದ್ಯ ಪೌಚುಗಳು, ಬಾಟಲಿಗಳು ಇದ್ದು, ಕುಡುಕರ ಅಡ್ಡೆಯಾಗಿದೆ. ಇದನ್ಬು ನಿರ್ವಹಣೆ ಮಾಡುವವರು ಯಾರು, ಇದನ್ನು ಹಾಳು ಗೆಡವಿ, ಈ ಭವನಕ್ಕೆ ಒಬ್ಬ ಆದರ್ಶ ಪುರುಷನ ಹೆಸರಿಟ್ಟು ಆ ವ್ಯಕ್ತಿಯ ಹೆಸರಿಗೆ ಕಪ್ಪು ಚುಕ್ಕಿ ಮಾಡಿ ಅವಮಾನ ಮಾಡಿದ್ದೀರಿ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಈ ವೇಳೆ ಜಿಲ್ಲಾಧಿಕಾರಿ ಡಾ.ಸುರೇಶ್ ಬಿ.ಇಟ್ನಾಳ್, ಎಸ್.ಪಿ.ಉಮಾಪ್ರಶಾಂತ್, ಲೋಕಾಯುಕ್ತ ಅಪರ ನಿಬಂಧಕರಾದ ರಾಜಶೇಖರ್, ಎನ್.ವಿ.ಅರವಿಂದ್, ಮಿಲನ, ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಎಂ.ಎಸ್.ಕೌಲಾಪೂರೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Previous articleಬೆಳ್ಳಂಬೆಳಗ್ಗೆ ಅಧಿಕಾರಿಗಳ ನಿದ್ದೆಗೆಡಿಸಿದ ಉಪಲೋಕಾಯುಕ್ತ!
Next articleಪಹಲ್ಗಾಂಮ್‌ ದಾಳಿ: ಮೃತದೇಹ ಗುರುತಿಸಲು ಕನ್ನಡಿಗರಿಗೆ ಸಚಿವ ಸಂತೋಷ್‌ ಲಾಡ್‌ ನೆರವು