ಆತ್ಮಲಿಂಗಕ್ಕೆ ಹೈಕೋರ್ಟ್ ಜಡ್ಜ್ ವಿಶೇಷ ಪೂಜೆ

0
13

ಗೋಕರ್ಣ: ರಾಜ್ಯ ಉಚ್ಚನ್ಯಾಯಲಯದ ನ್ಯಾಯಮೂರ್ತಿಗಳಾದ ಕೆ. ನಟರಾಜನ್‌ರವರು ಶನಿವಾರ ಸಂಜೆ ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರಕ್ಕೆ ಭೇಟಿ ನೀಡಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು.
ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯರಾದ ವೇ. ಪರಮೇಶ್ವರ ಮಾರ್ಕಾಂಡೆ ಪೂಜಾ ಕೈಂಕರ್ಯ ನೆರವೇರಿಸಿದರು. ಬಳಿಕ ಮಂದಿರದವತಿಯಿಂದ ಪ್ರಸಾದ ನೀಡಿ ಗೌರವಿಸಿದರು. ಇದಕ್ಕೂ ಮೊದಲು ಮಹಾಗಣಪತಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಈ ವೇಳೆ ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳು, ಮಂದಿರದ ಸಿಬ್ಬಂದಿ ಉಪಸ್ಥಿತರಿದ್ದರು. ಇಲ್ಲಿನ ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.

Previous articleಜಾತ್ರೆಯಲ್ಲಿ ಕಲುಷಿತ ಆಹಾರ, ನೀರು ಸೇವಿಸಿ 10ಜನ ಅಸ್ವಸ್ಥ
Next articleಅಭಿಪ್ರಾಯ ಭೇದ ಮರೆತು ಬಿಜೆಪಿ ಗೆಲುವಿಗೆ ಪ್ರಯತ್ನಿಸೋಣ