ಆಡಳಿತಾತ್ಮಕ ವೈಫಲ್ಯ ಸರ್ವೇ ಸಾಮಾನ್ಯವಾಗಿಬಿಟ್ಟಿದೆ

0
24

ಬೆಂಗಳೂರು: ಕಾಂಗ್ರೆಸ್ ಆಳ್ವಿಕೆಯಲ್ಲಿ ಕರ್ನಾಟಕ ಲೋಕ ಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಹಲವು ವಿಶ್ವವಿದ್ಯಾಲಯಗಳಲ್ಲಿ ಆಡಳಿತಾತ್ಮಕ ವೈಫಲ್ಯ ಸರ್ವೇ ಸಾಮಾನ್ಯವಾಗಿಬಿಟ್ಟಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಕಿಂಚಿತ್ತು ಸಾಮಾನ್ಯ ಜ್ಞಾನ, ವೃತ್ತಿಪರತೆ, ಉತ್ತರದಾಯಿತ್ವ, ಜವಾಬ್ದಾರಿ, ಸಮಯ ಪಾಲನೆ ಇಲ್ಲದ ಅಧಿಕಾರಿಗಳಿಂದ ವಿದ್ಯಾರ್ಥಿಗಳ ಜೀವನ ಅಯೋಮಯವಾಗಿದೆ. ಕಲಬುರುಗಿಯ ದ್ವಿತೀಯ ಪಿ.ಯು. ವಿದ್ಯಾರ್ಥಿನಿಯೊಬ್ಬರಿಗೆ ಪದವಿ ಪೂರ್ಣ ಶಿಕ್ಷಣ ಇಲಾಖೆ ಹಾಗೂ CET ಪರೀಕ್ಷಾ ಫಲಿತಾಂಶ ಅದಲು ಬದಲು ಆಗಿರುವುದು ಇವರ ದುರಾಡಳಿತಕ್ಕೆ, ಅಸಮರ್ಥತೆಗೆ ಮತ್ತೊಂದು ಉದಾಹರಣೆ. ಇಂಜಿನಿಯರಿಂಗ್ ಕನಸು ಕಾಣುತ್ತಿದ್ದ ವಿದ್ಯಾರ್ಥಿನಿ ಈಗ ಕಂಗಾಲಾಗಿದ್ದಾರೆ. ಈ ರೀತಿಯಾದ ತಪ್ಪುಗಳು, ದೋಷಗಳು ಪುನರವಾರ್ತನೆಯಾಗದಿರಲಿ. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಲಿ. ಕೆ.ಇ.ಎ ಅಧಿಕಾರಿಗಳು ಈ ವಿದ್ಯಾರ್ಥಿನಿಗೆ ಅನ್ಯಾಯವಾಗದಂತೆ ಕ್ರಮ ವಹಿಸಲಿ ಎಂದಿದ್ದಾರೆ.

Previous articleಕಮಲ್ ಹಾಸನ್ ಕೂಡಲೇ ಬೇಷರತ್ ಕನ್ನಡಿಗರ ಕ್ಷಮೆ ಕೇಳಬೇಕು
Next articleಕಮಲ್‌ ಹೇಳಿಕೆಯಿಂದ ಅವರ ಅಜ್ಞಾನ ಬಯಲುಗೊಳಿಸಿದೆ