ಆಟವಾಡುತ್ತ ನೀರಿನ ಟ್ಯಾಂಕ್‌ಗೆ ಬಿದ್ದು 2 ವರ್ಷದ ಮಗು ದುರ್ಮರಣ

0
12

ಬೆಳಗಾವಿ: ಎರಡೂವರೆ ವರ್ಷದ ಮಗು ನೀರಿನ ಟ್ಯಾಂಕ್‌​ನೊಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.
ಕಂಗ್ರಾಳ ಗಲ್ಲಿಯಲ್ಲಿ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು. ಸಾಯೀಶಾ ಸಂದೀಪ ಬಡವನಾಚೆ ಮೃತಪಟ್ಟ ಮಗು. ನೀರು ತುಂಬಿದೆಯೇ ಎಂದು ನೋಡಲು ಮನೆಯವರು ಟ್ಯಾಂಕಿನ ಮುಚ್ಚಳ ತೆರೆದಿದ್ದಾರೆ. ಈ ಸಂದರ್ಭದಲ್ಲಿ ಪಕ್ಕದಲ್ಲೇ ಆಟವಾಡುತ್ತಿದ್ದ ಮಗು ಟ್ಯಾಂಕ್‌ನೊಳಗೆ ಬಿದ್ದಿದೆ. ಇದನ್ನು ತಕ್ಷಣಕ್ಕೆ ಮನೆಯವರು ಗಮನಿಸಿಲ್ಲ. ಮಗು ಕಾಣದೇ ಇದ್ದಾಗ ಗಾಬರಿಯಾಗಿ ಎಲ್ಲೆಡೆ ಹುಡುಕಾಡಿದ್ದಾರೆ. ಆದರೂ ಸುಳಿವು ಸಿಕ್ಕಿರಲಿಲ್ಲ. ಸಂಜೆಯ ವೇಳೆಗೆ ಟ್ಯಾಂಕಿನಲ್ಲಿ ಮಗು ಬಿದ್ದಿದ್ದು ಗೊತ್ತಾಗಿದೆ. ಕೂಡಲೇ ಮಗುವನ್ನು ಮಗುವನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆಗೆ ಕರೆತರುವ ಮುನ್ನವೇ ಮಗು ಸಾವಿಗೀಡಾಗಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಖಡೇ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಕ್ರೈಂ ತಡೆಯಲು ಪೊಲೀಸರಿಂದ ಗ್ರಾಮ ವಾಸ್ತವ್ಯ‌
Next articleಗುಜರಾತ್ ಗೇಮ್ ದುರಂತ ಪ್ರಕರಣ: ಎಲ್ಲರಿಗೂ ಎಚ್ಚರಿಕೆಯ ಗಂಟೆ