ಮಂಗಳೂರು: ಮೀನುಗಾರರ ಬಹು ಸಮಯದ ಬೇಡಿಕೆಯಂತೆ ಕಡಲ ನಡುವೆ ಮೀನುಗಾರರು ತುರ್ತು ಅವಘಡ, ಅನಾರೋಗ್ಯ ಪರಿಸ್ಥಿತಿಗೆ ತಕ್ಷಣ ಸ್ಪಂದಿಸಲು ಸಹಕಾರಿಯಾಗುವಂತೆ ಸೀ ಆಂಬುಲೆನ್ಸ್ ವ್ಯವಸ್ಥೆಗೆ ಈಗಾಗಲೇ ಟೆಂಡರ್ ಕರೆಯಲಾಗುತ್ತಿದ್ದು, ಆಗಸ್ಟ್‌ನೊಳಗೆ ಕಾರ್ಯಗತವಾಗಬಹುದು ಎಂದು ರಾಜ್ಯದ ಮೀನುಗಾರಿಕಾ ಸಚಿವ ಮಂಕಾಳ ಎಸ್. ವೈದ್ಯ ತಿಳಿಸಿದ್ದಾರೆ.
ನಗರದಲ್ಲಿ ಇಂದು ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಮಂಗಳೂರು ಧಕ್ಕೆಯ ಮೂರನೆ ಹಂತದ ಕಾಮಗಾರಿ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳನ್ನು ಒಟ್ಟಾಗಿ ಸುಮಾರು ೮೦ ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಟೆಂಡರ್ ಕರೆಯಲಾಗಿದೆ. ಡ್ರೆಜ್ಜಿಂಗ್ ಕಾಮಗಾರಿಗೂ ಟೆಂಡರ್ ಕರೆಯಲಾಗಿದೆ. ನೂತನ ಸರಕಾರವು ಮೀನುಗಾರರಿಗೆ ನೀಡುತ್ತಿದ್ದ ೧.೫೦ ಲಕ್ಷ ಲೀಟರ್ ಡೀಸೆಲನ್ನು ೨ ಲಕ್ಷ ಲೀಟರ್‌ಗೆ ಏರಿಕೆ ಮಾಡಿದ್ದು, ಅದನ್ನು ಐದು ತಿಂಗಳ ಅವಧಿಯೊಳಗೆ ಉಪಯೋಗಿಸಲು ಸಹಕಾರಿಯಾಗುವಂತೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು.