ಆಕಳ ಕರುವಿಗೆ ಕೃತಕ ಕಾಲು ಜೋಡಣೆ: ಮಿಡಿದ ಮಹಾವೀರ ಲಿಂಬ್ ಸೆಂಟರ್

0
10

ಮಹಾವೀರ ಲಿಂಬ್ ಸೆಂಟರ್ ಹಾಗೂ ಆಲ್ ಇಂಡಿಯಾ ಜೈನ್ ಯುಥ್ ಫೆಡರೇಷನ್ ವತಿಯಿಂದ ಅಭಿನವನಗರದ ವಿಶ್ವ ಹಿಂದೂ ಪರಿಷತ್ ಸಂಚಾಲಿತ ಗೋ ಸೇವಾ ಕೇಂದ್ರದಲ್ಲಿ ರೈಲು ಅಪಘಾತದಲ್ಲಿ ಕಾಲು ಕಳೆದುಕೊಂಡ ಆಕಳ ಕರುವಿಗೆ ಕೃತಕ ಕಾಲು ಜೋಡಣೆ ಮಾಡಲಾಯಿತು.
ಧಾರವಾಡದಲ್ಲಿ ರೈಲು ಹಳಿಯಲ್ಲಿ ಹೋಗುತ್ತಿದ್ದ ಆಕಳು ಕರು ಅಪಘಾತವಾಗಿತ್ತು. ಈ ಸಂದರ್ಭದಲ್ಲಿ ಆಕಳು ಸಾವನ್ನಪ್ಪಿದ್ದು, ಕರು ಬಚಾವ್ ಆಗಿತ್ತು. ಆದರೆ ಹಿಂದಿನ ಕಾಲು‌ ಕಟ್ ಆಗಿದ್ದರಿಂದ ಕರು ನಡೆದಾಡಲು ತೀವ್ರ ತೊಂದರೆಯಾಗಿತ್ತು. ಇದನ್ನು ಗುರುತಿಸಿ ಮಹಾವೀರ ಲಿಂಬ್ ಸೆಂಟರ್ ವತಿಯಿಂದ ಅಳತೆ ಪಡೆದು ಕೃತಕ ಕಾಲು ಜೋಡಣೆ ಮಾಡಲಾಯಿತು.

Previous articleಇಬ್ಬರ ಹತ್ಯೆಗೆ ಸಂಚು, ಓರ್ವನ ಕೊಲೆ
Next article‘ಅಶ್ವಮೇಧ’ ಬಸ್ಸುಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ: ಮಹಿಳೆಯರಿಗೆ ಉಚಿತ ಪ್ರಯಾಣ