ಆಂಧ್ರಪ್ರದೇಶ ರೀತಿ ವಕ್ಫ್ ಮಂಡಳಿ ರದ್ದುಗೊಳಿಸಿ

0
19

ಬೆಂಗಳೂರು: ಆಂಧ್ರಪ್ರದೇಶದಲ್ಲಿ ವಕ್ಫ್ ಮಂಡಳಿಯನ್ನು ವಜಾಗೊಳಿಸಿದ ಅಲ್ಲಿನ NDA ಸರ್ಕಾರದ ದಿಟ್ಟ ನಿರ್ಧಾರ ಅತ್ಯಂತ ಸ್ವಾಗತಾರ್ಹ ಎಂದು ವಿಪಕ್ಷ ನಾಯಕ ಆರ್ ಅಶೋಕ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು  ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗು ಉಪಮುಖ್ಯಮಂತ್ರಿ ಪವನ ಕಲ್ಯಾಣ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ವಕ್ಫ್ ಮಂಡಳಿಯ ಪರಿಕಲ್ಪನೆಯೇ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದು, ಕರ್ನಾಟಕದಲ್ಲೂ ಆಂಧ್ರಪ್ರದೇಶದ ರೀತಿ ವಕ್ಫ್ ಮಂಡಳಿಯನ್ನು ರದ್ದುಗೊಳಿಸುವ ಮೂಲಕ ರೈತರು, ಮಠ-ಮಂದಿರಗಳು, ಜನಸಾಮಾನ್ಯರು ಹಾಗು ಸರ್ಕಾರಿ ಆಸ್ತಿಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಬ್ಬಾಳಿಕೆಗೆ ಶಾಶ್ವತ ಅಂತ್ಯ ಹಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ ಕೆ ಶಿವಕುಮಾರ ಅವರನ್ನ ಒತ್ತಾಯಿಸುತ್ತೇನೆ ಎಂದಿದ್ದಾರೆ.

Previous articleಭ್ರಷ್ಟಾಚಾರದ ಸುಳಿಯಿಂದ ಹೊರಬಂದು ದಾಖಲೆ ಲಾಭದೆಡೆಗೆ KSDL
Next articleಸ್ಮಶಾನ ಕಾರ್ಮಿಕರನ್ನು ಕಾಯಂಗೊಳಿಸಿದ್ದು ನೆಮ್ಮದಿ ತಂದ ತೀರ್ಮಾನ