ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನ ವಿಚಾರಿಸಿದ ಭೀಮರಾವ ಪಾಟೀಲ

0
31

ವಿಷಾಹಾರ ಸೇವಿಸಿ ತಾಲ್ಲೂಕಿನ ಬಸವತೀರ್ಥ ಗುರುಕುಲ ವಸತಿಶಾಲೆಯ 75ವಿದ್ಯಾರ್ಥಿಗಳು ಅಸ್ವಸ್ಥ ಆಸ್ಪತ್ರೆಗೆ ದಾಖಲು

ಹುಮ್ನಾಬಾದ್: ವಿಷಾಹಾರ ಸೇವಿಸಿ ತಾಲ್ಲೂಕಿನ ಕಲ್ಲೂರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಬಸವತೀರ್ಥ ಮಠದ ಅಡಿಯಲ್ಲಿ ನಡೆಯುವ ಗುರುಕುಲ ವಸತಿಸಹಿತ ಶಾಲೆಯಲ್ಲಿ ಬುಧವಾರ ಬೆಳಿಗ್ಗೆ 10ಕ್ಕೆ ಸಂಭವಿಸಿದೆ.
ಘಟನೆ ಹಿನ್ನೆಲೆಯಲ್ಲಿ ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಪಟ್ಡಣದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆಯನ್ನು ನೀಡಲಾಗುತ್ತಿದೆ. ನಿನ್ನೆ ರಾತ್ರಿ ಅನ್ನವನ್ನೇ ಬೆಳಿಗ್ಗೆ ವಗ್ಗರಣೆ ಹೊಡೆದು ಉಣಬಡಿಸಿದ್ದೇ ಘಟನೆಗೆ ಕಾರಣ ಎಂದು ಮಕ್ಕಳು, ಪಾಲಕರು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷ ಶಂಕರ ಪವಾರ ಆರೋಪಿಸಿದರು.

ಎಂ.ಎಲ್.ಸಿ ಭೇಟಿ: ವಿಷಯ ತಿಳಿಯತಿದ್ದಂತೆ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಭೇಟಿನೀಡಿದ ಎಂ.ಎಲ್.ಸಿ ಭೀಮರಾವ ಪಾಟೀಲ ಮಕ್ಕಳ ಆರೋಗ್ಯ ವಿಚಾರಿಸಿದರು. ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಇನ್ನೂ ಶಾಲೆಯಲ್ಲಿರುವ ಮಕ್ಕಳಿಗೆ ಅಲ್ಲೇ ತೆರಳಿ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು. ಆಸ್ಪತ್ರೆ ಮುಖ್ಯ ಆರೋಗ್ಯ ಅಧಿಕಾರಿ ಡಾ.ನಾಗನಾಥ ಹುಲಸೂರೆ ಹಾಗೂ ಸಿಬ್ಬಂದಿ ಇದ್ದರು.

Previous articleಯಾರು ವನ್ಯಜೀವಿಗಳ ಪರವಾಗಿ ನಿಲ್ಲುತ್ತಾರೆ…
Next articleಸಂಡೂರು ಉಪಚುನಾವಣೆ: ಮಧ್ಯಾಹ್ನ 1 ಗಂಟೆಗೆ ಶೇ.43 ರಷ್ಟು ಮತದಾನ