ಅಶೋಕ್ ಹಾರನಹಳ್ಳಿ ಅವರಿಗೆ ಶಂಕರ ಅನುಗ್ರಹ ಪುರಸ್ಕಾರ

0
22

ಹೊಸಪೇಟೆ: ನಗರಕ್ಕೆ ಸೋಮವಾರ ಆಗಮಿಸಿದ್ದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಅವರನ್ನು ಹೊಸಪೇಟೆಯ ಸಂಗೀತ ಭಾರತಿ ಸಂಸ್ಥೆ ನೀಡುವ ರಾಜ್ಯಮಟ್ಟದ ಆದಿ ಗುರು ಶ್ರೀ ಶಂಕರ ಅನುಗ್ರಹ ಪುರಸ್ಕಾರ-೨೦೨೪ ನೀಡಿ ಗೌರವಿಸಲಾಯಿತು.
ನಗರದ ಹೊಸಪೇಟೆ ತಾಲೂಕು ಬ್ರಾಹ್ಮಣರ ಸಂಘದ ಪದಾಧಿಕಾರಿಗಳು ಸಹ ನಗರದ ಗಾಯಿತ್ರೀ ದೇವಸ್ಥಾನದಲ್ಲಿ ಅಶೋಕ್ ಹಾರನಹಳ್ಳಿ ಅವರನ್ನು ಸನ್ಮಾನಿಸಿದರು. ಬ್ರಾಹ್ಮಣ ಸಮಾಜದ ಮುಖಂಡರಾದ ಕೆ.ಹನುಮಂತರಾವ್, ಶೀನಂ ಭಟ್ಟರು, ದಿವಾಕರ್, ರಮೇಶ್ ಪುರೋಹಿತ, ಅನಿಲ್ ಜೋಷಿ, ಗೋವಿಂದರಾವ್, ಗುರುರಾಜ ಶಿಗ್ಗಾವಿ, ವೇಣುಗೋಪಾಲ ವೈದ್ಯ, ಶ್ರೀಪಾದ, ಗೊವೀಂದ ಕುಲಕರ್ಣಿ, ನರಸಿಂಹಮೂರ್ತಿ ಅಪ್ಪಣ್ಣ ಸೇರಿದಂತೆ ಇತರ ಸಮಾಜದ ಮುಖಂಡರು ಇದ್ದರು.

Previous articleಬಸ್ ಸ್ಟೇರಿಂಗ್‌ಗೆ ಹಸಿರು ಟವೆಲ್ ಕಟ್ಟಿ ರೈತರ ಆಕ್ರೋಶ
Next articleರಾಷ್ಟ್ರೀಯ ಸ್ಕೇಟಿಂಗ್ ಚಾಂಪಿಯನ್‌ಶಿಪ್: ಯುಪಿಗೆ ಚಿನ್ನ, ಕರ್ನಾಟಕಕ್ಕೆ ಬೆಳ್ಳಿ