ಅವೈಜ್ಞಾನಿಕ ಪರೀಕ್ಷಾ ಪದ್ಧತಿ: ಪರೀಕ್ಷಾರ್ಥಿಗಳ ಭವಿಷ್ಯ ಹಾಳುಗೆಡುವುತ್ತಿವೆ…

ಆಡಳಿತಾತ್ಮಕ ಬದಲಾವಣೆ, ಪರಿವರ್ತನೆ ಆಗದೆ ಇದ್ದರೆ ಸಂಸ್ಥೆಯನ್ನು ಮುಚ್ಚುವುದೇ ಒಳ್ಳೆಯದು

ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಆಡಳಿತಾತ್ಮಕ ಬದಲಾವಣೆ, ಪರಿವರ್ತನೆ ಆಗದೆ ಇದ್ದರೆ ಸಂಸ್ಥೆಯನ್ನು ಮುಚ್ಚುವುದೇ ಒಳ್ಳೆಯದು ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಗೊಂದಲ, ಭ್ರಷ್ಟಾಚಾರ, ಸ್ವಜನಪಕ್ಷಪಾತ, ವಿಳಂಬ ನೀತಿ, ಪಾರದರ್ಶಕತೆ ಇಲ್ಲದೆ ಇರುವುದು, ಅಸಮರ್ಥ ಪರೀಕ್ಷಾ ನಿಯಂತ್ರಕರು, ಅವೈಜ್ಞಾನಿಕ ಪರೀಕ್ಷಾ ಪದ್ಧತಿ,
ಪರೀಕ್ಷಾರ್ಥಿಗಳ ಭವಿಷ್ಯವನ್ನು ಹಾಳುಗೆಡುವುತ್ತಿರುವುದು, ಸಾಲು ಸಾಲು ತಪ್ಪುಗಳಾದರೂ ತಿದ್ದುಕೊಳ್ಳದೆ ಇರುವುದು, ದಕ್ಷ ಅಧಿಕಾರಿಗಳನ್ನು ವರ್ಗ ಮಾಡುವ ಮೂಲಕ ಪರೋಕ್ಷವಾಗಿ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುತ್ತಿರುವ ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಆಡಳಿತಾತ್ಮಕ ಬದಲಾವಣೆ, ಪರಿವರ್ತನೆ ಆಗದೆ ಇದ್ದರೆ ಸಂಸ್ಥೆಯನ್ನು ಮುಚ್ಚುವುದೇ ಒಳ್ಳೆಯದು.

ಸರ್ಕಾರ ಇನ್ನಾದರೂ ಕ್ರಮ ಕೈಗೊಳ್ಳಲಿ. ಅಧಿಕಾರಿ, ಒಳ್ಳೆಯ ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳಬೇಕೆಂದು ಅಹರ್ನಿಶಿ ಓದುವ ಮಕ್ಕಳಿಗೆ, ಪರೀಕ್ಷಾರ್ಥಿಗಳಿಗೆ, ಮಗ/ಮಗಳು ಓದಿ ಅಧಿಕಾರಿ ಆಗುತ್ತಾರೆಂದು ಕನಸಿನ ಗೋಪುರ ಕಟ್ಟಿಕೊಂಡಿರುವ ಪೋಷಕರ ನೋಯಿಸಬೇಡಿ. ಲೋಕಸೇವಾ ಆಯೋಗದ ಶುದ್ದೀಕರಣ ಪ್ರಾರಂಭವಾಗಲಿ ಎಂದಿದ್ದಾರೆ.