ಅರ್ಜುನ್ ಪಾರ್ಥಿವ ಶರೀರಕ್ಕೆ ಜಿಲ್ಲಾಡಳಿತದಿಂದ ಅಂತಿಮ ನಮನ

0
3

ಕಾಸರಗೋಡು: ಶಿರೂರಿನಲ್ಲಿ ಭೂಕುಸಿತಕ್ಕೆ ಸಿಲುಕಿ ನದಿಪಾಲಾಗಿ ೭೨ ದಿನಗಳ ಬಳಿಕ ಪತ್ತೆಯಾದ ಲಾರಿ ಚಾಲಕ ಕೋಝಿಕ್ಕೋಡ್ ಕನ್ನಾಡಿಕ್ಕಾಲ್ ನಿವಾಸಿ ಅರ್ಜುನ್ ಅವರ ಪಾರ್ಥಿವ ಶರೀರ ಆಂಬುಲೆನ್ಸ್ ಮೂಲಕ ಕಾಸರಗೋಡಿಗೆ ತಲಪಿದಾಗ ಜಿಲ್ಲಾಡಳಿತ ವತಿಯಿಂದ ಅಂತಿಮ ನಮನ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಕೆ . ಇಂಪಾಶೇಖರ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ . ಶಿಲ್ಪಾ ಮೊದಲಾದವರು ಪುಷ್ಪ ಚಕ್ರ ಅರ್ಪಿಸಿದರು. ಹೊಸ ಬಸ್ಸು ನಿಲ್ದಾಣ ಪರಿಸರದಲ್ಲಿ ತಡರಾತ್ರಿ ಯಾದಾರೂ ನೂರಾರು ಮಂದಿ ಅಂತಿಮ ನಮನ ಸಲ್ಲಿಸಲು ನೆರೆದಿದ್ದರು.
ಅಂಬ್ಯುಲೆನ್ಸ್‌ನಲ್ಲಿದ್ದ ಅರ್ಜುನ್ ರ ಸಹೋದರಿಯ ಪತಿ ಜಿತಿನ್, ಸಹೋದರ ಅಭಿಜಿತ್ ರವರನ್ನು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಸಾಂತ್ವನ ಪಡಿಸಿದರು. ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್, ಕಾರವಾರ ಶಾಸಕ ಸತೀಶ್ ಸೈಲ್ ರವರು ಜೊತೆಗಿದ್ದರು. ೭೨ ದಿನಗಳ ಶೋಧದ ಬಳಿಕ ಗಂಗಾವಳಿ ನದಿಯ ಆಳಭಾಗದಲ್ಲಿ ಲಾರಿಯೊಂದರ ಒಳಗೆ ಕೊಳೆ ತ ಸ್ಥಿತಿಯಲ್ಲಿ ಅರ್ಜುನ್‌ರವರ ಮೃತದೇಹ ದೊರೆತಿತ್ತು.

Previous articleಕೇಂದ್ರ ಸಚಿವೆ ಪ್ರಕರಣಕ್ಕೂ ಸಿಎಂ ಪ್ರಕರಣಕ್ಕೂ ಅಜಗಜಾಂತರ ವ್ಯತ್ಯಾಸ
Next articleಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿ ಅಂಗಡಿಗೆ ಬೆಂಕಿ