ಅರಣ್ಯ ರಕ್ಷಕ ಸುಂದರೇಶ್‌ ಸಾವು

0
7

ಸಕಲೇಶಪುರ ತಾಲೂಕಿನ ಕಾಡುಮನೆ ಎಸ್ಟೇಟ್ ಬಳಿಯ ಅರಣ್ಯದಲ್ಲಿ ಗುರುವಾರ ಕಾಡ್ಗಿಚ್ಚು ನಂದಿಸಲು ಹೋಗಿ ಗಂಭೀರವಾಗಿ ಗಾಯಗೊಂಡಿದ್ದ ಅರಣ್ಯ ಇಲಾಖೆಯ ಗಾರ್ಡ್ ಸುಂದರೇಶ್ ಅವರು ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅರಣ್ಯಾಧಿಕಾರಿಗಳಾದ ಮಂಜುನಾಥ್, ಗಾರ್ಡ್ ಗಳಾದ ಸುಂದರೇಶ್ ಮತ್ತು ತುಂಗೇಶ್ ಅವರು ಕಾಡ್ಗಿಚ್ಚು ನಂದಿಸುವ ವೇಳೆ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶೇ 80 ರಷ್ಟು ಸುಟ್ಟ ಗಾಯಗಳಾಗಿದ್ದ ಸುಂದರೇಶ್‌ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಅದಕ್ಕಾಗಿಯೇ ಝೀರೋ ಟ್ರಾಫಿಕ್‌ನಲ್ಲಿ ಸುಂದರೇಶ್‌ ಹಾಗೂ ಮಂಜುನಾಥ ಅವರನ್ನು ಬೆಂಗಳೂರಿಗೆ ಆಸ್ಪತ್ರೆಗೆ ರವಾನಿಸಲಾಗಿತ್ತು. ಸುಂದರೇಶ್, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

Previous article31 ಲಕ್ಷ ರುದ್ರಾಕ್ಷಿಗಳಿಂದ ಬೃಹತ್‌ ಶಿವಲಿಂಗ
Next articleರಾಜ್ಯಗಳಿಗೆ ಇಂದೇ ಜಿಎಸ್‌ಟಿ ಬಾಕಿ ಪರಿಹಾರ: ನಿರ್ಮಲಾ ಸೀತಾರಾಮನ್‌