ಅಯೋಧ್ಯೆ ರಾಮಮಂದಿರ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ಇನ್ನಿಲ್ಲ

0
24

ಲಖನೌ: ಅಯೋಧ್ಯೆಯ ರಾಮಜನ್ಮಭೂಮಿ ದೇವಸ್ಥಾನದ ಪ್ರಧಾನ ಅರ್ಚಕ ಮಹಂತ್ ಸತ್ಯೇಂದ್ರ ದಾಸ್ ಅವರು ನಿಧನರಾಗಿದ್ದಾರೆಂದು ತಿಳಿದುಬಂದಿದೆ.
ಸತ್ಯೇಂದ್ರ ದಾಸ್ ಅವರು ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿದ್ದರು. ಸಂಜಯ್ ಗಾಂಧಿ ಪೋಸ್ಟ್ ಗ್ರಾಜುಯೇಟ್ ಇನ್​​​​ಸ್ಟಿಟ್ಯೂಟ್​ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಇಹಲೋಕ ತ್ಯಜಿಸಿದ್ದಾರೆ. ಅಕ್ಟೋಬರ್ 15ರಂದು ಸತ್ಯೇಂದ್ರ ದಾಸ್ ಅವರ ಸ್ಥಿತಿ ಹದಗೆಟ್ಟಿದ್ದರಿಂದ ಪಿಜಿಐನ ನರವಿಜ್ಞಾನ ವಿಭಾಗಕ್ಕೆ ದಾಖಲಿಸಲಾಗಿತ್ತು. ಅವರನ್ನು ಅಯೋಧ್ಯೆಯಿಂದ ಕರೆತರಲಾಯಿತು. ನರವಿಜ್ಞಾನ ವೈದ್ಯರ ಮೇಲ್ವಿಚಾರಣೆಯಲ್ಲಿ ಅವರ ಚಿಕಿತ್ಸೆ ನಡೆಯಿತು. ಅವರ ನರವೈಜ್ಞಾನಿಕ ಪರೀಕ್ಷೆಗಳನ್ನು ಮಾಡಲಾಯಿತು. ಅವರ ಸ್ಥಿತಿ ಗಂಭೀರವಾಗಿತ್ತು. ಆಚಾರ್ಯ ಸತ್ಯೇಂದ್ರ ಅವರು ತಿನ್ನುವುದನ್ನು ನಿಲ್ಲಿಸಿದ್ದರಿಂದ ತುಂಬಾ ದುರ್ಬಲರಾಗಿದ್ದರು. ಹಲವು ದಿನಗಳ ಚಿಕಿತ್ಸೆ ಬಳಿಕ ಅವರನ್ನು ಮತ್ತೆ ಅಯೋಧ್ಯೆಗೆ ಕರೆದೊಯ್ಯಲಾಗಿತ್ತು.. ಸತ್ಯೇಂದ್ರ ದಾಸ್‌ 1992ರ ಡಿಸೆಂಬ‌ರ್ 6ರಂದು ಬಾಬರಿ ಮಸೀದಿಯನ್ನು ಕೆಡವಿದಾಗ ತಾತ್ಕಾಲಿಕ ರಾಮ ಮಂದಿರದ ಅರ್ಚಕರಾಗಿದ್ದರು.

Previous articleಭೀಮಾ ತೀರದ ಭಾಗಪ್ಪ ಹರಿಜನ ಹತ್ಯೆ
Next articleಭದ್ರಾವತಿ ಶಾಸಕರ ಪುತ್ರನ ಕರೆ ಪ್ರಕರಣಕ್ಕೆ ಹೊಸ ತಿರುವು: ಅನಾಮಧೇಯ ವ್ಯಕ್ತಿ ಕರೆ ಎಂದು ಮಹಿಳಾ ಅಧಿಕಾರಿ ದೂರು