ಅಯೋಧ್ಯಾ: ಬಾಲರಾಮನ ಹಣೆಗೆ ಸೂರ್ಯನ ಕಿರಣಗಳು ಸ್ಪರ್ಶಿಸುವ ಮೂಲಕ ಸೂರ್ಯ ತಿಲಕ ರಾಮನ ಹಣೆಯನ್ನು ಅಲಂಕರಿಸಿತು.
ರಾಮಲಲ್ಲಾನ ಹಣೆಯ ಮೇಲೆ ಸೂರ್ಯ ರಶ್ಮಿ ಬೀಳುವ ಮೂಲಕ ಈ ಸೂರ್ಯ ತಿಲಕ ರಾಮನ ಹಣೆಯನ್ನು ಅಲಂಕರಿಸಿತು. ಸರಿಯಾಗಿ ಮಧ್ಯಾಹ್ನ 12 ಗಂಟೆಗೆ ಸೂರ್ಯನ ಕಿರಣ ರಾಮನ ಹಣೆಯ ಮೇಲೆ ಬಿದ್ದಿದ್ದು, ಸುಮಾರು 90 ಸೆಕೆಂಡ್‌ಗಳ ಕಾಲ ಶ್ರೀರಾಮನ ಹಣೆಯನ್ನು ಸೂರ್ಯನ ತಿಲಕ ಅಲಂಕರಿಸಿತ್ತು. ಭಾರತೀಯ ವಿಜ್ಞಾನಿಗಳಿಂದ ವಿನ್ಯಾಸಗೊಳಿಸಲ್ಪಟ್ಟ ಸೂರ್ಯ ತಿಲಕ ಸಮಾರಂಭವು ವರ್ಷಕ್ಕೊಮ್ಮೆ ನಡೆಯುವ ಆಧ್ಯಾತ್ಮಿಕ ಕಾರ್ಯಕ್ರಮವಾಗಿದ್ದು, ಪ್ರತಿ ವರ್ಷ ರಾಮ ನವಮಿಯ ದಿನದಂದು ಮಧ್ಯಾಹ್ನ 12 ಗಂಟೆಗೆ ಸುಮಾರು ಆರು ನಿಮಿಷಗಳ ಕಾಲ ಸೂರ್ಯನ ಕಿರಣಗಳು ಭಗವಾನ್ ರಾಮನ ವಿಗ್ರಹದ ಹಣೆಯ ಮೇಲೆ ಬೀಳುತ್ತವೆ.