ಅಯೋಧ್ಯೆಯಲ್ಲಿ ಕರ್ನಾಟಕ ಬ್ಯಾಂಕ್‌

0
22

ಅಯೋಧ್ಯೆ: ಅಯೋಧ್ಯೆಯಲ್ಲಿ ಭಕ್ತರಿಗೆ ಸೇವೆ ಒದಗಿಸಲು ಕರ್ನಾಟಕ ಬ್ಯಾಂಕ್’​​​ನ ನೂತನ ಶಾಖೆಯನ್ನು ಪ್ರಾರಂಭಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಹಂಚಿಕೊಂಡಿರುವ ಕರ್ನಾಟಕ ಬ್ಯಾಂಕ್‌ ಇದು ದೇಶದ 915ನೇ ಶಾಖೆಯಾಗಿದೆ ಎಂದಿದೆ. ಶಾಖೆಯನ್ನ ರಾಮಮಂದಿರ ದೇವಸ್ಥಾನದ ಸಹ ಉಸ್ತುವಾರಿ ಮತ್ತು ಕನ್ನಡಿಗರಾದ ಗೋಪಾಲ್ ನಾಗರಕಟ್ಟೆ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಎಕ್ಸಿಕ್ಯುಟಿವ್ ಡೈರೆಕ್ಟರ್ ಶೇಕರ್ ರಾವ್, ಎಂಡಿ ಶ್ರೀಕೃಷ್ಣನ್ ಹರಿಹರ ಶರ್ಮಾ, ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಸ್ಥಳಿಯರು ಉಪಸ್ಥಿತರಿದ್ದರು.ಅಯೋಧ್ಯೆಯ ರಾಮಪಥದ ಮುಖ್ಯ ರಸ್ತೆಯಲ್ಲಿ ಬ್ಯಾಂಕ್ ಶಾಖೆ ಆರಂಭವಾಗಿದೆ.

Previous articleವಿಶ್ವಕ್ಕೆ ವಿವೇಕದ ಆನಂದ ನೀಡಿದ ನರೇಂದ್ರ
Next articleಕಷ್ಟಕಾಲದಲ್ಲಿ ಬೆನ್ನಿಗೆ ನಿಂತ ಕುಮಾರಣ್ಣ