ಅಭ್ಯರ್ಥಿ ಕೇಸ್‌ ಬಗ್ಗೆ ಜಾಹೀರಾತು ನೀಡುವುದು ಕಡ್ಡಾಯ

0
8

ನವದೆಹಲಿ: ಪ್ರತಿ ಮತದಾರರ ತನ್ನ ಅಭ್ಯರ್ಥಿಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶ ನೀಡಲಾಗಿದೆ. ಕ್ರಿಮಿನಲ್‌ ಹಿನ್ನಲೆಯುಳ್ಳವರು ತಮ್ಮ ಕೇಸಿನ ಬಗ್ಗೆ ಜಾಹೀರಾತು ನೀಡವುದು ಕಡ್ಡಾಯ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವಕುಮಾರ ತಿಳಿಸಿದರು.
ದೆಹಲಿಯ ವಿಜ್ಞಾನ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ದಿನಪತ್ರಿಕೆಯಲ್ಲಿ 3, ಚಾನೆಲ್‌ನಲ್ಲಿ 3 ಬಾರಿ ಕ್ರಿಮಿನಲ್‌ ಹಿನ್ನಲೆಯುಳ್ಳವರು ತಮ್ಮ ಕೇಸಿನ ಬಗ್ಗೆ ಜಾಹೀರಾತು ನೀಡವುದು ಕಡ್ಡಾಯ ಎಂದು ಅವರು ತಿಳಿಸಿದರು.
ದುಡ್ಡು ಹಂಚುವುದು, ಆಮೀಷವೊಡ್ಡುವುದರ ಬಗ್ಗೆ‌ ದೂರು ನೀಡಲು ಅವಕಾಶ ನೀಡಲಾಗಿದ್ದು, ಫೋಟೋ ತೆಗೆದು ಕಳಿಸಿದರೆ ನಮ್ಮ ತಂಡ 100 ನಿಮಿಷದಲ್ಲಿ ಸ್ಥಳಕ್ಕೆ ತಲುಪಲಿದೆ. ಇದಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಕಂಟ್ರೋಲ್‌ ರೂಮ್ ತೆಗೆಯಲಾಗುವುದು. ಹಣ, ಹೆಂಡ, ಉಡುಗೊರೆ ಹಂಚುವ ಆರೋಪ ಬಂದರೆ ತಕ್ಷಣವೇ ಕ್ರಮ ತೆಗದುಕೊಳ್ಳಲಾಗುವುದು ಎಂದರು.
ಈ ಬಾರಿ ಫೋನ್‌ ಪೇ, ಗೂಗಲ್‌ ಪೇ ಮೂಲಕ ಹಣ ಹಂಚುವ ಆರೋಪ ಕೇಳಿಬಂದಿದ್ದು, ಡಿಜಿಟಲ್ ವಹಿವಾಟಿನ ಮೇಲೂ ಕಣ್ಣಿಡಲಾಗುವುದು‌ ಎಂದರು.

Previous articleಮನೆಯಿಂದಲೇ ಮತದಾನಕ್ಕೆ ಅವಕಾಶ
Next articleಸುಳ್ಳು ಸುದ್ದಿ ಹರಡಿಸಿದರೆ ಕಠಿಣ ಕ್ರಮ