ಅಭೂತಪೂರ್ವ ಬಜೆಟ್

0
9

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡನೆ ಅವರು ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದಂಥ ಬಜೆಟ್ ಅಭೂತಪೂರ್ವವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡನೆ ಕುರಿತು ಮಾತನಾಡಿರುವ ಅವರು ಇದು ಮಧ್ಯಂತರ ಮುಂಗಡ ಪತ್ರವಾಗಿದ್ದು ಈ ಅವಧಿಯ ಕೊನೆಯ ಮುಂಗಡ ಪತ್ರವಿದು. ಮುಂಬರುವ ಚುನಾವಣೆಯ ದೃಷ್ಟಿಯಲ್ಲಿಟ್ಟುಕೊಳ್ಳದೆ ದೇಶದ ಹಿತ ಹಾಗೂ ಬಡವರ ಹಿತವನ್ನು ಗಮನದಲ್ಲಿಟ್ಟುಕೊಂಡು ಹಣಕಾಸಿನ ಭದ್ರತೆಯ ಜೊತೆಗೆ ಅಭಿವೃದ್ಧಿಪರ ಬಜೆಟ್ ಅನ್ನು ಅವರು ಮಂಡಿಸಿದ್ದಾರೆ. ಅವರಿಗೆ ಸಮಸ್ತ ದೇಶದ ಹಾಗೂ ಕರ್ನಾಟಕದ ಜನತೆಯ ಪರವಾಗಿ ಧನ್ಯವಾದಗಳು ಮತ್ತು ಅಭಿನಂದನೆಗಳು ಎಂದಿದ್ದಾರೆ

Previous articleದೇಶದ ಸರ್ವಾಂಗೀಣ ಅಭಿವೃದ್ಧಿಗೆ ಬಜೆಟ್ ಪೂರಕ
Next articleಇದೊಂದು ಜನಪರ, ಅಭಿವೃದ್ಧಿಪರ ಹಾಗೂ ವಿಕಾಸಪೂರಕ ಬಜೆಟ್